ಪಂಜಾಬ್‌ನ ಜಲಂಧರ್‌ನಲ್ಲಿ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ (Manoranjan Kalia) ಅವರ ಮನೆ ಎದುರು ಸ್ಫೋಟ ಸಂಭವಿಸಿದೆ. ಅವರು ಮತ್ತು ಮನೆಯವರು ಸುರಕ್ಷಿತರಾಗಿದ್ದಾರೆ. ಈ ಘಟನೆ ಮಧ್ಯರಾತ್ರಿ ಸುಮಾರು 1 ಗಂಟೆಗೆ ನಡೆದಿದೆ.
ಸ್ಫೋಟದ ಶಬ್ದ ಮೊದಲು ಸಿಡಿಲು ಅನ್ನಿಸಿದ್ದು, ನಂತರ ಸ್ಫೋಟ ಎಂದು ಮನೋರಂಜನ್ ಕಾಲಿಯಾ ತಿಳಿಸಿದ್ದಾರೆ. ಘಟನೆಯ ನಂತರ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಜಲಂಧರ್ ಪೊಲೀಸ್ ಆಯುಕ್ತೆ ಧನಪ್ರೀತ್ ಕೌರ್ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಆಧಾರಿತ ತನಿಖೆ ನಡೆಯುತ್ತಿದೆ. ಇದು ಗ್ರೆನೇಡ್ ದಾಳಿ ಆಗಿರಬಹುದೆಂಬ ಅನುಮಾನವಿದೆ ಎಂದು ತಜ್ಞರು ಹೇಳಿದ್ದಾರೆ.
ಕಳೆದ ತಿಂಗಳು, ಜಲಂಧರ್ ಮೂಲದ ಯೂಟ್ಯೂಬರ್ ಮನೆ ಮೇಲೆ ಗ್ರೆನೇಡ್ ದಾಳಿ ನಡೆದಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಮುಖ್ಯ ಆರೋಪಿ ಅಮೃತ್ಪ್ರೀತ್ ಸಿಂಗ್ ಎನ್ನಲಾಗಿದ್ದು, ಎನ್ಕೌಂಟರ್‌ನಲ್ಲಿ ಗಾಯಗೊಂಡಿದ್ದ.
ಈ ವೇಳೆ ಶಂಕಿತನೊಬ್ಬ ಇ-ರಿಕ್ಷಾದಲ್ಲಿ ಬಂದು, ಕಾಲಿಯಾ ಅವರ ಮನೆ ಬಾಗಿಲ ಬಳಿ ಗ್ರೆನೇಡ್ ಎಸೆದಿದ್ದು, ಅದು ಬಾಗಿಲಿಗೆ ಹಾನಿ ಮಾಡಿದೆ. ಸಿಸಿಟಿವಿಯಲ್ಲಿ ಶಂಕಿತನು ಶಾಸ್ತ್ರಿ ಮಾರುಕಟ್ಟೆಯಿಂದ ಬಂದು ಹಿಂದಕ್ಕೆ ತಿರುಗಿ ಗ್ರೆನೇಡ್ ಎಸೆದು ಪರಾರಿಯಾಗಿರುವುದು ಕಾಣಿಸಿದೆ.
ಇದೀಗ ತನಿಖೆ ಗಂಭೀರವಾಗಿ ಮುಂದುವರೆದಿದ್ದು, ಆರೋಪಿ ಶೀಘ್ರವೇ ಪತ್ತೆಯಾಗುವ ಸಾಧ್ಯತೆ ಇದೆ.