Search
WhatsApp alerts

Home › Auto

Acer Foster Award: ಜ್ಯೂರಿ ಸಭೆ!

administrator · Published

Acer Foster Award

ದೇಶದ ಪ್ರಮುಖ ಆಟೋಮೋಟಿವ್ ಮಾಧ್ಯಮಗಳ ಸಂಘಟನೆಯಾಗಿ ‘ಫಾಸ್ಟರ್’ ಗುರುತಿಸಿಕೊಂಡಿದೆ. ಜನಪ್ರಿಯ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ನೀಡುವ ಏಸರ್ ಫಾಸ್ಟರ್ ಪ್ರಶಸ್ತಿ – 2025 (Acer Foster Award) ಸಮಾರಂಭ ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಫೆಬ್ರವರಿ 27ರಿಂದ ನಾಲ್ಕನೇ ಆವೃತ್ತಿಯ ಪ್ರಶಸ್ತಿ ಸುತ್ತಿಗೆ vozahan ಆಯ್ಕೆ ಮಾಡಲು ಚೆನ್ನೈನ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್ ನಲ್ಲಿ ಜ್ಯೂರಿಗಳ ಸಭೆ ನಡೆಯಲಿದೆ. ಈ ಬಾರಿಯೂ 2024ರ ಆರಂಭದಿಂದ ಮಾರಾಟಕ್ಕೆ ಬಂದ ಹೊಸ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಅರ್ಹತೆ ಹೊಂದಿರುತ್ತವೆ. ಆಯ್ಕೆಗೊಂಡ vozahan ಅಂತಿಮ ಸುತ್ತಿಗೆ ನಾಮನಿರ್ದೇಶನಗೊಳ್ಳಲಿವೆ.

2025ರ ಜ್ಯೂರಿ ಸದಸ್ಯರು

  • ಅಮಿತ್ ಛಂಗನಿ (ಮೋಟಾರಾಯ್ಡ್ಸ್)
  • ಗೌರವ್ ಯಾದವ್ (ಗಾಡಿವಾಡಿ)
  • ನರೇಂದ್ರ ಶರ್ಮಾ (ಗೇರ್ಫ್ಲಿಕ್)
  • ಪ್ರಮೀತ್ ಘೋಷ್ (ಡ್ರೈವ್ಸ್ಪಾರ್ಕ್)
  • ರೋಹಿತ್ ಖುರಾನಾ (ಕಾರ್ಬ್ಲಾಗ್)
  • ರೋಶನ್ ಜೋಸೆಫ್ (ಪೈಲಟ್ ಆನ್ ವೀಲ್ಸ್)

ಪ್ರಶಸ್ತಿ ವಿಭಾಗಗಳು

  • ವರ್ಷದ ಕಾರು
  • ವರ್ಷದ ಬೈಕ್
  • ವರ್ಷದ ಪ್ರೀಮಿಯಂ ಕಾರು
  • ವರ್ಷದ ಪ್ರೀಮಿಯಂ ಬೈಕ್
  • ಆಟೋಮೋಟಿವ್ ಕ್ಷೇತ್ರದ ಖ್ಯಾತ ನಾಮರು

ಈ ಪ್ರಶಸ್ತಿಯನ್ನು ವಿಶ್ವದಾದ್ಯಂತ 250 ಮಿಲಿಯನ್ ಓದುಗರನ್ನು ತಲುಪುವ ಮಾಧ್ಯಮ ಸಂಸ್ಥೆಗಳ ಅನುಭವಿ ಆಟೋಮೋಟಿವ್ ಪತ್ರಕರ್ತರು ನೀಡುತ್ತಾರೆ. ಇದರಿಂದ ಫಾಸ್ಟರ್ ಪ್ರಶಸ್ತಿ ಆಟೋಮೋಟಿವ್ ವಲಯದಲ್ಲಿ ಮಹತ್ವದ ಸ್ಥಾನ ಹೊಂದಿದೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page