
ಲ್ಯಾಪ್‌ಟಾಪ್ಸ್ ಮತ್ತು tablets ಕ್ಷೇತ್ರದಲ್ಲಿ ಖ್ಯಾತಿಯನ್ನೂ ಪಡೆದಿರುವ ಏಸರ್ (Acer) ಈಗ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ತೈವಾನ್ ಮೂಲದ ಈ ಕಂಪನಿ ಭಾರತೀಯ ಇಂಡಕಲ್ ಟೆಕ್ನಾಲಜೀಸ್ ಜೊತೆ ಕೈಜೋಡಿಸಿದ್ದು, ಮಾರ್ಚ್ 25, 2025 ರಂದು ತನ್ನ ಹೊಸ ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆ ಮಾಡಲಿದೆ.
ಅಮೆಜಾನ್‌ನಲ್ಲಿ ವಿಶೇಷ ಪೇಜ್
ಅಮೆಜಾನ್ ತನ್ನ ವೆಬ್‌ಸೈಟ್‌ನಲ್ಲಿ ಏಸರ್ ಸ್ಮಾರ್ಟ್‌ಫೋನ್ ಗಾಗಿ ವಿಶೇಷ ಪುಟವನ್ನು ತೆರೆದಿದ್ದು, “ದಿ ನೆಕ್ಸ್ಟ್ ಹಾರಿಜಾನ್ – ಏಸರ್ ಸ್ಮಾರ್ಟ್‌ಫೋನ್ ” ಎಂದು ಘೋಷಿಸಲಾಗಿದೆ. ಇದು ಏಸರ್ ಭಾರತದಲ್ಲಿ ಹಲವಾರು ಮಾದರಿಗಳ ಫೋನ್ಗಳನ್ನು ಬಿಡುಗಡೆ ಮಾಡಬಹುದು ಎಂಬ ಸೂಚನೆ ನೀಡುತ್ತದೆ.
ಈ ಫೋನ್ ಗಳ ಬೆಲೆ ರೂ. 15,000 ರಿಂದ 50,000 ರ ನಡುವೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಏಸರ್ನ “ಏಸರ್ ಒನ್ ಲಿಕ್ವಿಡ್ S162E4” ಮತ್ತು “ಏಸರ್ ಒನ್ ಲಿಕ್ವಿಡ್ S272E4” ಎಂಬ ಎರಡು ಮಾದರಿಗಳು ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿವೆ.
ಮುಖ್ಯ ವೈಶಿಷ್ಟ್ಯಗಳು
- S162E4: 6.5-ಇಂಚು HD+ ಡಿಸ್ಪ್ಲೇ, 16MP ಹಿಂಭಾಗದ ಕ್ಯಾಮೆರಾ, 5MP ಮುಂಭಾಗದ ಕ್ಯಾಮೆರಾ, 4GB RAM, 64GB ಸ್ಟೋರೇಜ್, 5000mAh ಬ್ಯಾಟರಿ.
- S272E4: 6.75-ಇಂಚು HD+ ಡಿಸ್ಪ್ಲೇ, 20MP ಹಿಂಭಾಗದ ಕ್ಯಾಮೆರಾ, 4GB RAM, 64GB ಸ್ಟೋರೇಜ್, 5000mAh ಬ್ಯಾಟರಿ.
- ಇವೆರಡೂ ಮೀಡಿಯಾಟೆಕ್ ಚಿಪ್‌ಸೆಟ್ ಹೊಂದಿದ್ದು, ಸ್ಟೋರೇಜ್ ವಿಸ್ತರಣೆ ಆಯ್ಕೆಯೂ ಲಭ್ಯ.