
ಆಪಲ್ (Apple) ತನ್ನ ಹೊಸ ಐಫೋನ್ 16ಇ (iPhone 16e) smartphone ಮಾರಾಟವನ್ನು ಇಂದು ಪ್ರಾರಂಭಿಸಿದೆ. ಈ ಫೋನ್ ಫೆಬ್ರವರಿ 19 ರಂದು ಬಿಡುಗಡೆಗೊಂಡಿದ್ದು, ಮುಂಗಡ ಬುಕ್ಕಿಂಗ್ ಕೂಡಾ ಆರಂಭವಾಗಿತ್ತು. ಭಾರತದಲ್ಲಿ ಇದರ ಬೆಲೆ ₹59,900 ಆಗಿದ್ದು, ಹೆಚ್ಚಿನ ಕೊಡುಗೆಗಳೊಂದಿಗೆ ಗ್ರಾಹಕರು ಕಡಿತ ಬೆಲೆಗೆ ಖರೀದಿಸಬಹುದು.
ಬ್ಯಾಂಕ್ ಆಫರ್ & ವಿನಿಮಯ ಬೋನಸ್
- ICICI, Kotak Mahindra, SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ₹4,000 ಕ್ಯಾಶ್‌ಬ್ಯಾಕ್.
- ಹಳೆಯ ಫೋನ್ ವಿನಿಮಯ ಮಾಡಿದರೆ ₹6,000 ಬೋನಸ್.
- ಈ ಆಫರ್ ಹೊಂದಿಸಿಕೊಂಡರೆ ಐಫೋನ್ 16ಇ ಯ ಅಂತಿಮ ಬೆಲೆ ₹49,900 ಆಗಬಹುದು.
iPhone 16e ವೈಶಿಷ್ಟ್ಯಗಳು
- 6.1 ಇಂಚಿನ OLED ಸ್ಕ್ರೀನ್
- A18 ಚಿಪ್ ಪ್ರೊಸೆಸರ್– ಹೆಚ್ಚುವರಿ ಆಪಲ್ ಇಂಟೆಲಿಜೆನ್ಸ್ ಫೀಚರ್‌ಗಳು
- USB-C ಪೋರ್ಟ್
- 48MP ಫ್ಯೂಷನ್ ಕ್ಯಾಮೆರಾ (2x ಟೆಲಿಫೋಟೋ ಜೂಮ್)
- 12MP ಸೆಲ್ಫಿ ಕ್ಯಾಮೆರಾ
- ಹೊಸ ಆಕ್ಷನ್ ಬಟನ್
ಇಂದು ಬೆಳಗ್ಗೆ 8 ಗಂಟೆಯಿಂದ ಅಂಗಡಿಗಳಲ್ಲಿ ಲಭ್ಯ! ಐಫೋನ್ 16ಇ ಮಾರಾಟ ಫೆಬ್ರವರಿ 28 ರಿಂದ ಎಲ್ಲಾ ಆಧಿಕೃತ ಅಂಗಡಿಗಳಲ್ಲಿ ಪ್ರಾರಂಭವಾಗಿದೆ.