Mumbai: ಬಾಲಿವುಡ್ ನಟ ಸಲ್ಮಾನ್ ಖಾನ್ ನನ್ನು (Salman Khan) ಕೊಲ್ಲುವುದಾಗಿ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಸಹಚರರು ಬೆದರಿಕೆಯೊಡ್ಡಿದ್ದಾರೆ. ಈ ಹಿನ್ನೆಲೆ, ಸಲ್ಮಾನ್ ಖಾನ್ ನಿವಾಸಕ್ಕೆ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದೆ.
ಈಗಾಗಲೇ, ಬಿಷ್ಣೋಯಿ ಸಹಚರರು ಸಲ್ಮಾನ್ ಖಾನ್ ರವರ ಆಪ್ತ ರಾಜಕಾರಣಿ ಬಾಬಾ ಸಿದ್ಧಿಖಿಯನ್ನು ಕೊಲೆ ಮಾಡಿದ್ದಾರೆ. ಸಲ್ಮಾನ್ ಖಾನ್ ಪದೇ ಪದೇ ಜೀವ ಬೆದರಿಕೆ ಬರುತ್ತಲೇ ಇದೆ. ಕೆಲ ತಿಂಗಳ ಹಿಂದೆ, ಖಾನ್ ರವರ ಗ್ಯಾಲೆಕ್ಸಿ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು, ಗಾಜಿನ ಕಿಟಕಿಗಳ ಮೇಲೆ ಶೂಟ್ ಮಾಡಿ ಪರಾರಿಯಾಗಿದ್ದರು.
ಪುನಃ ಇದೇ ರೀತಿಯ ದಾಳಿ ಸಂಭವಿಸಬಹುದಾದ ಕಾರಣ, ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದ್ದು, ವಿಶೇಷವಾಗಿ ರಸ್ತೆಯ ಬದಿ ಇರುವ ಮತ್ತು ಇತರ ಅಪಾರ್ಟ್ಮೆಂಟ್ , ಗಳಿಂದ ಕಾಣುವ ಕಿಟಕಿಗಳ ಮೇಲೆ ಈ ಗಾಜುಗಳನ್ನು ಅಳವಡಿಸಲಾಗಿದೆ. ಈ ಕ್ರಮದಿಂದ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.