back to top
26.6 C
Bengaluru
Wednesday, February 25, 2026
HomeMoviesKannadaToxic Movie ಗಾಗಿ ಕೆಲಸ ಮಾಡುತ್ತಿದೆ Hollywood ನ ಖ್ಯಾತ ಸಂಸ್ಥೆ

Toxic Movie ಗಾಗಿ ಕೆಲಸ ಮಾಡುತ್ತಿದೆ Hollywood ನ ಖ್ಯಾತ ಸಂಸ್ಥೆ

- Advertisement -
- Advertisement -

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಭಾರಿ ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ. ಸಿನಿಮಾವನ್ನು ಹಾಲಿವುಡ್ (Hollywood) ಗುಣಮಟ್ಟದಲ್ಲಿ ತೆರೆಗೆ ತರಲು ಚಿತ್ರತಂಡ ಅವಿರತ ಶ್ರಮಿಸುತ್ತಿದೆ.

ಸಿನಿಮಾದಲ್ಲಿ ಕನ್ನಡದ ಕಲಾವಿದರ ಜೊತೆಗೆ ಬೇರೆ ಬೇರೆ ಚಿತ್ರರಂಗದ ಖ್ಯಾತನಾಮ ನಟ-ನಟಿಯರು ಕೆಲಸ ಮಾಡುತ್ತಿದ್ದಾರೆ. ಕೆಲವು ವಿದೇಶಿ ನಟ-ನಟಿಯರು ಸಹ ಸಿನಿಮಾದಲ್ಲಿದ್ದಾರೆ.

ಕೆಲವು ಹಾಲಿವುಡ್ ತಂತ್ರಜ್ಞರು ಸಹ ‘ಟಾಕ್ಸಿಕ್’ ಚಿತ್ರತಂಡದಲ್ಲಿದ್ದಾರೆ. ಜೊತೆಗೆ ಕೆಲವು ವಿದೇಶಿ ಸಂಸ್ಥೆಗಳು ‘ಟಾಕ್ಸಿಕ್’ (Toxic) ಸಿನಿಮಾಕ್ಕಾಗಿ ಕೆಲಸ ಮಾಡುತ್ತಿವೆ.

‘ಟಾಕ್ಸಿಕ್’ ಸಿನಿಮಾದ ಆಕ್ಷನ್ ಅನ್ನು ಹಾಲಿವುಡ್​ನ ಖ್ಯಾತ ಫೈಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಕೆಲಸ ಮಾಡಲಿದ್ದಾರೆ. ಕೆಲವು ಅತ್ಯುತ್ತಮ ಆಕ್ಷನ್ ದೃಶ್ಯಗಳು ‘ಟಾಕ್ಸಿಕ್’ ಸಿನಿಮಾದಲ್ಲಿ ಇರಲಿವೆ. ಸಿನಿಮಾದಲ್ಲಿ ನಯನತಾರಾ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಾಯಕಿಯರಾಗಿ ನಟಿಸುತ್ತಿದ್ದಾರೆ.

ಸಿನಿಮಾ 2025ರ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎಂದು ಸ್ವತಃ ಯಶ್ ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page