
Bharti Airtel, ಅದಾನಿ ಡೇಟಾ Network ಲಿಮಿಟೆಡ್ (ADNL) ನಿಂದ 400 MHz ಸ್ಪೆಕ್ಟ್ರಮ್ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸ್ಪೆಕ್ಟ್ರಮ್ 26 GHz ಬ್ಯಾಂಡ್ ನಲ್ಲಿದ್ದು, ಕರ್ನಾಟಕ, ಮುಂಬೈ, ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡು ಸೇರಿ ಆರು ರಾಜ್ಯಗಳಲ್ಲಿ 5G ಸೇವೆಗಳಿಗಾಗಿ ಬಳಸಲಾಗುತ್ತದೆ.
ADNL ಇದು ಅದಾನಿ ಎಂಟರ್ಪ್ರೈಸಸ್‌ನ ಅಂಗಸಂಸ್ಥೆಯಾಗಿದ್ದು, 2022 ರಲ್ಲಿ ಈ ಸ್ಪೆಕ್ಟ್ರಮ್ ಅನ್ನು ಸುಮಾರು ₹212 ಕೋಟಿಗೆ ಖರೀದಿಸಿತ್ತು. ಈಗ ಅದು ಈ ಹಕ್ಕುಗಳನ್ನು Airtel ಗೆ ವರ್ಗಾಯಿಸುತ್ತಿದೆ. ಈ ವ್ಯವಹಾರಕ್ಕೆ ಟೆಲಿಕಾಂ ನಿಯಂತ್ರಕರ ಅನುಮೋದನೆ ಅಗತ್ಯವಿದೆ.
ಭಾರ್ತಿ ಹೆಕ್ಸಾಕಾಮ್, Airtel ನ ಅಂಗಸಂಸ್ಥೆಯು ಈ ಒಪ್ಪಂದದ ಭಾಗವಾಗಿದ್ದು, ಇದು ಕಂಪನಿಯ 5G ವಿಸ್ತರಣೆಗೆ ಸಹಕಾರಿಯಾಗಲಿದೆ. 26 GHz ಬ್ಯಾಂಡ್ ಹೆಚ್ಚಿನ ಸ್ಪೀಡ್ ಮತ್ತು ಕಡಿಮೆ latency ಗೆ ಸಹಾಯಮಾಡುತ್ತದೆ, ಇದು ಉತ್ತಮ 5G ಅನುಭವಕ್ಕೆ ಅಗತ್ಯ.
ಡಿಸೆಂಬರ್ 2024ರ ವೇಳೆಗೆ Airtel ಗೆ 120 ಮಿಲಿಯನ್ 5G ಬಳಕೆದಾರರಿದ್ದು, 414 ಮಿಲಿಯನ್ ಒಟ್ಟು ಗ್ರಾಹಕರನ್ನು ಹೊಂದಿದೆ. TRAI ಪ್ರಕಾರ, ಜನವರಿ 2025 ರಲ್ಲಿ Airtel ಹೊಸದಾಗಿ 16.5 ಲಕ್ಷ ಗ್ರಾಹಕರನ್ನು ಸೇರಿಸಿಕೊಂಡಿದೆ, ರಿಲಯನ್ಸ್ ಜಿಯೋ 6.8 ಲಕ್ಷ ಗ್ರಾಹಕರನ್ನು.