back to top
20.3 C
Bengaluru
Monday, July 21, 2025
HomeBusinessAdani Green Company ಯಿಂದ ಭಾರತದ ಇತಿಹಾಸದಲ್ಲಿ ಅತಿದೊಡ್ಡ ನವೀಕರಣ ಇಂಧನ ಸಾಧನೆ

Adani Green Company ಯಿಂದ ಭಾರತದ ಇತಿಹಾಸದಲ್ಲಿ ಅತಿದೊಡ್ಡ ನವೀಕರಣ ಇಂಧನ ಸಾಧನೆ

- Advertisement -
- Advertisement -

New Delhi: ಅದಾನಿ ಗ್ರೂಪಿನ ಅಂಗ ಸಂಸ್ಥೆ ಅದಾನಿ ಗ್ರೀನ್ ಎನರ್ಜಿ (Adani Green Company) 15,000 ಮೆಗಾವ್ಯಾಟ್ ಮೀರಿದ ನವೀಕರಣ ಇಂಧನ ಉತ್ಪಾದನೆ ಮೂಲಕ ಭಾರತದಲ್ಲಿ ದಾಖಲೆ ಬರೆದಿದೆ. ಗುಜರಾತ್‌ನ ಖಾವಡಾದಲ್ಲಿ 1,011.5 ಮೆಗಾವ್ಯಾಟ್ ಸಾಮರ್ಥ್ಯದ ಹೊಸ ಘಟಕವನ್ನು ನಿರ್ಮಿಸಿ, ಸಂಸ್ಥೆಯ ಒಟ್ಟು ಸಾಮರ್ಥ್ಯವನ್ನು 15,539.9 ಮೆಗಾವ್ಯಾಟ್ (ಅಥವಾ 15.54 ಗಿಗಾವ್ಯಾಟ್)ಗೆ ವೃದ್ಧಿಪಡಿಸಿದೆ.

ಈ ಮೂಲಕ ಭಾರತದಲ್ಲಿ ಇಷ್ಟು ದೊಡ್ಡ ಮಟ್ಟದ ನವೀಕರಣ ಇಂಧನ ಸಾಮರ್ಥ್ಯ ಹೊಂದಿರುವ ಮೊದಲ ಕಂಪನಿಯೆಂದು ಅದಾನಿ ಗ್ರೀನ್ ಹೆಸರು ಗಳಿಸಿದೆ.

ಅದಾನಿ ಮುಖ್ಯಸ್ಥ ಗೌತಮ್ ಅದಾನಿ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಅದಾನಿ ಗ್ರೀನ್ ವಿಶ್ವದ ಟಾಪ್ 10 ಗ್ರೀನ್ ಪವರ್ ಸ್ಥಳಗಳಲ್ಲಿ ಒಂದಾದ ಖಾವಡಾದಲ್ಲಿ ವೇಗವಾಗಿ ಇಂಧನ ಸಾಮರ್ಥ್ಯ ಹೆಚ್ಚಿಸುತ್ತಿದೆ. ಇದು ಭಾರತದ ಗ್ರೀನ್ ಎನರ್ಜಿ ಗುರಿಗೆ ನಮ್ಮ ಬದ್ಧತೆಯ ಪ್ರತಿಬಿಂಬ” ಎಂದು ಹೇಳಿದ್ದಾರೆ.

ಅದಾನಿ ಗ್ರೀನ್ ಸಂಸ್ಥೆ 2030ರೊಳಗೆ ತನ್ನ ಸಾಮರ್ಥ್ಯವನ್ನು 30,000 ಮೆಗಾವ್ಯಾಟ್ (30 ಗಿಗಾವ್ಯಾಟ್) ಆಗಿಸುವ ಗುರಿಯಲ್ಲಿದೆ. ಈಗಿನ ಸ್ಥಿತಿಯಲ್ಲಿ 15 ಗಿಗಾವ್ಯಾಟ್‌ನಷ್ಟು ಸಾಮರ್ಥ್ಯವಿದ್ದು, ಅದರಲ್ಲಿ ಬಹುಪಾಲು ಸೌರ ಶಕ್ತಿ.ಈ ಶಕ್ತಿ ಬಳಸಿ 79 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯ.

ವಿಭಾಗವಾರು ಉತ್ಪಾದನಾ ಸಾಮರ್ಥ್ಯ

  • ಸೌರಶಕ್ತಿ: 11,005.5 ಮೆಗಾವ್ಯಾಟ್
  • ವಾಯುಶಕ್ತಿ: 1,977.8 ಮೆಗಾವ್ಯಾಟ್
  • ಹೈಬ್ರಿಡ್ (ಸೌರ + ವಾಯು): 2,556.6 ಮೆಗಾವ್ಯಾಟ್

ಅದಾನಿ ಸಂಸ್ಥೆ ಖಾವಡಾದಲ್ಲಿ 538 ಚದರ ಕಿಮೀ ವಿಸ್ತೀರ್ಣದ ನವೀಕರಣ ಇಂಧನ ಪಾರ್ಕ್ ನಿರ್ಮಿಸುತ್ತಿದೆ. ಇದು ಪ್ಯಾರಿಸ್ ನಗರಾಗಿಂತ ಐದು ಪಟ್ಟು ದೊಡ್ಡದು. ಈ ಯೋಜನೆ ಸಂಪೂರ್ಣವಾಗಿ ಪೂರ್ಣಗೊಂಡರೆ, ಇದು ವಿಶ್ವದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಘಟಕ ಆಗಲಿದೆ.

ಚೀನಾದಲ್ಲಿ ನವೀಕರಣ ಶಕ್ತಿ ಸಾಮರ್ಥ್ಯ 1,400 ಗಿಗಾವ್ಯಾಟ್ ಆಗಿದ್ದು, ಒಂದೇ ಚೀನಾ ಕಂಪನಿ – ಥ್ರೀ ಗಾರ್ಜಸ್ ಕಾರ್ಪೊರೇಶನ್ – 223 ಗಿಗಾವ್ಯಾಟ್ ಶಕ್ತಿಯನ್ನು ಒಂಟಿಯಾಗಿ ಉತ್ಪಾದಿಸಬಹುದು.

ಇದೇ ರೀತಿ ನೆಕ್ಸ್ಟ್ಎರಾ ಎನರ್ಜಿ, ಸೀಮೆನ್ಸ್ ಗಮೆಸಾ, ಎನೆಲ್ ಗ್ರೀನ್ ಪವರ್ ಮುಂತಾದ ಜಾಗತಿಕ ಕಂಪನಿಗಳೂ ಈ ಕ್ಷೇತ್ರದಲ್ಲಿ ಮುಂಚೆ ಇದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page