New Delhi: ಭಾರತದಲ್ಲಿನ ಗೂಗಲ್ನ ಕ್ಲೈಡ್ ಸರ್ವಿಸ್ (Google’s Clyde service) ಮತ್ತು ಆಪರೇಷನ್ಸ್ಗೆ ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಸ್ವಚ್ಛ ಶಕ್ತಿ ಪೂರೈಕೆ ಆಗಲಿದೆ. ಇದರ ಕುರಿತು ಗೂಗಲ್ (Google) ಸಂಸ್ಥೆ ಅದಾನಿ ಗ್ರೂಪ್ ಮತ್ತು ಕ್ಲೀನ್ಮ್ಯಾಕ್ಸ್ (Adani Group and Cleanmax) ಎಂಬ ಎರಡು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.
ಕ್ಲೀನ್ ಮ್ಯಾಕ್ಸ್ ವತಿಯಿಂದ 125.4 ಮೆಗಾವ್ಯಾಟ್ನಷ್ಟು ಕ್ಲೀನ್ ಎನರ್ಜಿ ಗೂಗಲ್ನ ವಿವಿಧ ಕಚೇರಿಗಳಿಗೆ ಪೂರೈಕೆ ಆಗಲಿದೆ. ಹಾಗೆಯೇ, ಅದಾನಿ ಗ್ರೂಪ್ ಜೊತೆ 61.4 ಮೆಗಾವ್ಯಾಟ್ನಷ್ಟು ವಿದ್ಯುತ್ ಪೂರೈಕೆಗೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.
ಗೂಗಲ್ ಮತ್ತು ಅದಾನಿ ಗ್ರೂಪ್ ಗುರುವಾರ ಕ್ಲೀನ್ ಎನರ್ಜಿ (clean energy) ಸಹಯೋಗವನ್ನು ಘೋಷಿಸಿದ್ದು, ಕಂಪನಿಗಳ ಸಾಮೂಹಿಕ ಸುಸ್ಥಿರತೆಯ ಗುರಿಗಳನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಮತ್ತು ಭಾರತೀಯ ಗ್ರಿಡ್ಗೆ ಹೆಚ್ಚು ಶುದ್ಧ ಶಕ್ತಿಯನ್ನು ಸೇರಿಸುತ್ತದೆ.
‘ಗೂಗಲ್ ಫಾರ್ ಇಂಡಿಯಾ’ ಕಾರ್ಯಕ್ರಮದಲ್ಲಿ ಗೂಗಲ್ ಈ ಘೋಷಣೆ ಮಾಡಿದ್ದರೆ, ಅದಾನಿ ಗ್ರೂಪ್ ತನ್ನ ಹೇಳಿಕೆಯಲ್ಲಿ ವಿವರ ನೀಡಿದೆ.
“ಈ ಪಾಲುದಾರಿಕೆಯ ಮೂಲಕ ಅದಾನಿಯು ಗುಜರಾತ್ನ ಖಾವ್ಡಾದಲ್ಲಿ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸ್ಥಾವರದಲ್ಲಿರುವ ಹೊಸ ಸೌರ-ಪವನ ಹೈಬ್ರಿಡ್ ಯೋಜನೆಯಿಂದ ಶುದ್ಧ ಶಕ್ತಿಯನ್ನು ಪೂರೈಸುತ್ತದೆ. ಈ ಹೊಸ ಯೋಜನೆಯು 2025 ರ ಮೂರನೇ ತ್ರೈಮಾಸಿಕದಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ” ಎಂದು ಅದಾನಿ ಸಮೂಹವು ತಿಳಿಸಿದೆ. ಹೇಳಿಕೆ ತಿಳಿಸಿದೆ.
ಈ ನವೀನ ಸಹಯೋಗವು Cloud ಸೇವೆಗಳು ಮತ್ತು ಭಾರತದಲ್ಲಿನ ಕಾರ್ಯಾಚರಣೆಗಳನ್ನು ಕ್ಲೀನ್ ಎನರ್ಜಿಯಿಂದ ಬೆಂಬಲಿಸುವುದನ್ನು ಖಾತ್ರಿಪಡಿಸುವ ಮೂಲಕ Google ನ 24/7 ಕಾರ್ಬನ್-ಮುಕ್ತ ಶಕ್ತಿ ಗುರಿಯನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಭಾರತದಲ್ಲಿ Google ನ ಸುಸ್ಥಿರ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.