back to top
24.5 C
Bengaluru
Thursday, April 17, 2025
HomeNewsAGI: ಮನುಷ್ಯನಿಗಿಂತ ಚುರುಕು– Google DeepMind ಎಚ್ಚರಿಕೆ!

AGI: ಮನುಷ್ಯನಿಗಿಂತ ಚುರುಕು– Google DeepMind ಎಚ್ಚರಿಕೆ!

- Advertisement -
- Advertisement -


ಗೂಗಲ್‌ನ ಡೀಪ್‌ಮೈಂಡ್ (Google DeepMind) ಸಂಸ್ಥೆಯು “AGI” ಅಂದರೆ ಕೃತಕ ಸಾಮಾನ್ಯ ಬುದ್ಧಿಮತ್ತೆ, ಇದು ಭವಿಷ್ಯದಲ್ಲಿ ಮನುಷ್ಯನಿಗಿಂತ ಬುದ್ಧಿವಂತವಾಗಬಹುದು ಮತ್ತು ಮಾನವೀಯತೆಯ ಮೇಲಿದೆ ದೊಡ್ಡ ಅಪಾಯ ಎಂದು ಎಚ್ಚರಿಸಿದೆ.

2030ರ ವೇಳೆಗೆ AGI ಮಾನವನಷ್ಟೇ ಬುದ್ಧಿವಂತವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ಮಾನವ ಸಮಾಜಕ್ಕೆ ಶಾಶ್ವತ ಹಾನಿ ಉಂಟುಮಾಡಬಹುದು ಎಂಬುದು ಡೀಪ್‌ಮೈಂಡ್ ಸಂಶೋಧನೆಯ ನಿಷ್ಕರ್ಷೆ.

ಈಗಿನ ಕಾಲದಲ್ಲಿ ಎಲ್ಲೆಡೆ AI ಬಳಕೆ ಹೆಚ್ಚಾಗಿದೆ – ವೈದ್ಯಕೀಯದಿಂದ ಮನೆಕೆಲಸದವರೆಗೆ. ಇದು ಕೆಲವೊಂದು ಕ್ಷೇತ್ರಗಳಲ್ಲಿ ಉಪಯುಕ್ತವಾದರೂ, ಬೇರೆಯಡೆ ಅಪಾಯಕಾರಿಯಾಗಿ ಬೆಳೆಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. AGI ಮನುಷ್ಯನಷ್ಟು ಬುದ್ಧಿವಂತವಾದರೆ, ಅದು ಕೆಲವೊಮ್ಮೆ ನಿಯಂತ್ರಣಕ್ಕೆ ಬಾರದಂತಾಗಬಹುದು ಮತ್ತು ಮಾನವೀಯತೆಗೆ ಹಾನಿ ಮಾಡಬಹುದು.

AGI ಅಪಾಯಗಳನ್ನು ನಾಲ್ಕು ಭಾಗಗಳಲ್ಲಿ ವಿವರಿಸಲಾಗಿದೆ

  • ದುರುಪಯೋಗ – ಹಾನಿಕಾರಕ ಉದ್ದೇಶಗಳಿಗಾಗಿ ಬಳಕೆ
  • ತಪ್ಪು ಜೋಡಣೆ – ತಪ್ಪು ಉದ್ದೇಶಗಳೊಂದಿಗೆ AGI ಯೋಜನೆ
  • ತಪ್ಪುಗಳು – ತಾಂತ್ರಿಕ ದೋಷಗಳು
  • ರಚನಾತ್ಮಕ ಅಪಾಯಗಳು – ಸ್ಥಿತಿಗತಿಯಲ್ಲಿನ ನಿಖರ ಅಪಾಯಗಳು

AGIನ ದೋಷಪೂರಿತ ಬಳಕೆಯನ್ನು ತಡೆಯಲು ಗೂಗಲ್ ಮತ್ತು ಇತರ AI ಕಂಪನಿಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸಂಶೋಧನೆ ಸೂಚಿಸುತ್ತದೆ. ಡೀಪ್‌ಮೈಂಡ್ ಸಂಸ್ಥಾಪಕರಲ್ಲೊಬ್ಬರಾದ ಶೇನ್ ಲೆಗ್ ಅವರು, “AGI ಯಾವ ರೀತಿ ಮಾನವೀಯತೆಗೆ ನಷ್ಟ ಉಂಟುಮಾಡಬಹುದು ಎಂಬುದು ನಿಖರವಾಗಿ ಹೇಳಲು ಆಗದು, ಆದರೆ ಮುನ್ನೆಚ್ಚರಿಕೆ ಅಗತ್ಯ” ಎಂದು ತಿಳಿಸಿದ್ದಾರೆ.

ಡೀಪ್‌ಮೈಂಡ್‌ನ ಸಿಇಒ ಡೆಮಿಸ್ ಹಸ್ಸಾಬಿಸ್ ಅವರು 2024ರ ಫೆಬ್ರವರಿಯಲ್ಲಿ, “AGI ಮುಂದಿನ 5-10 ವರ್ಷಗಳಲ್ಲಿ ಮನುಷ್ಯನಿಗಿಂತ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿರಬಹುದು” ಎಂದು ಹೇಳಿದರು.

AGI ಎಂದರೇನು?

ಆರ್ಟಿಫಿಶಿಯಲ್​ ಜನರಲ್​ ಇಂಟೆಲಿಜೆನ್ಸ್​ (AGI) AI ಗಿಂತ ಮತ್ತೊಂದು ಹೆಜ್ಜೆ ಮುಂದಿದೆ. AI ಕಾರ್ಯ-ನಿರ್ದಿಷ್ಟವಾಗಿದ್ದರೂ AGI ಮಾನವ ಬುದ್ಧಿಮತ್ತೆಯಂತೆಯೇ ವ್ಯಾಪಕ ಶ್ರೇಣಿಯ ಕಾರ್ಯಗಳಿಗೆ ಅನ್ವಯಿಸಬಹುದಾದ ಬುದ್ಧಿವಂತಿಕೆಯನ್ನು ಹೊಂದಿದೆ. ಸರಳವಾಗಿ ಹೇಳುವುದಾದರೆ, AGI ಎಂಬುದು ಮಾನವರಂತೆಯೇ ವಿವಿಧ ಕ್ಷೇತ್ರಗಳಿಂದ ಜ್ಞಾನವನ್ನು ಅರ್ಥಮಾಡಿಕೊಳ್ಳುವ, ಕಲಿಯುವ ಮತ್ತು ಅನ್ವಯಿಸುವ ಸಾಮರ್ಥ್ಯವನ್ನು ಹೊಂದಿರುವ ಯಂತ್ರವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page