ಇತ್ತೀಚೆಗೆ, ಎಕ್ಸ್ (ಪೂರ್ವದಲ್ಲಿ ಟ್ವಿಟರ್) ಗ್ರೂಕ್ ಎಐ (Grok AI) ಎಂಬ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿತು. ಈ ವೈಶಿಷ್ಟ್ಯವು ಆರಂಭದಲ್ಲಿ ಎಕ್ಸ್ ಪ್ರೀಮಿಯಂ ಪ್ಲಸ್ ಸದಸ್ಯರಿಗೆ ಲಭ್ಯವಾಗಿತ್ತು, ಆದರೆ ಈಗ ಇದು ಭಾರತದಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಿದೆ.
ಗ್ರೋಕ್ ಎಐ, Xನ ಮೊದಲ AI ಸಾಧನವಾಗಿದೆ ಮತ್ತು ಇದು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ನಲ್ಲಿ AI ಚಾಟ್‌ಬಾಟ್ ಸೇವೆಯನ್ನು ಪ್ರಾರಂಭಿಸಿದೆ. ಇದರ ಮೂಲಕ ಬಳಕೆದಾರರು ನೈಜ ಸಮಯದಲ್ಲಿ ಮಾಹಿತಿ ಪಡೆಯಬಹುದು ಮತ್ತು ಸೆಲೆಬ್ರಿಟಿಗಳ ಬಗ್ಗೆ ಕೆಲವೊಂದು ಸಲಹೆಗಳನ್ನು ಪಡೆಯಬಹುದು.
ಎಲೋನ್ ಮಸ್ಕ್ ಅವರು ಎಕ್ಸ್ ಪ್ರೀಮಿಯಂ ಪ್ಲಸ್ ಪ್ಲಾನ್ ಅನ್ನು ಪ್ರಾರಂಭಿಸಿದ್ದಾರೆ. ಇದರ ಬೆಲೆ ತಿಂಗಳಿಗೆ $16 (ಅಂದಾಜು ರೂ. 1330.54) ಆಗಿದ್ದು, ಬಳಕೆದಾರರಿಗೆ ಜಾಹೀರಾತು-ಮುಕ್ತ ಅನುಭವವನ್ನು ನೀಡುತ್ತದೆ.
ಎಲೋನ್ ಮಸ್ಕ್ ಅವರು ಎಕ್ಸ್ ಅನ್ನು ಸೂಪರ್ ಅಪ್ಲಿಕೇಶನ್ ಆಗಿ ರೂಪಿಸುವ ಯೋಚನೆಯಲ್ಲಿ ಇದ್ದಾರೆ. ಈ ವರ್ಷದಲ್ಲಿ, ಬಳಕೆದಾರರು ಹಣ ವರ್ಗಾವಣೆಗೆ, ಟಿವಿ ಸೇವೆಗಳಿಗೆ ಹಾಗೂ AI ಚಾಟ್‌ಬಾಟ್ ಗ್ರೋಕ್‌ನಲ್ಲಿ ಹಲವು ಹೊಸ ನವೀಕರಣಗಳನ್ನು ಅನುಭವಿಸಬಹುದು.