Bengaluru : ಬೆಂಗಳೂರಿನ ಸಂಚಾರ ದಟ್ಟಣೆಯನ್ನು (Bengaluru traffic) ನಿಯಂತ್ರಿಸಲು ಸಂಚಾರಿ ಪೊಲೀಸರು ಹೊಸ ತಂತ್ರಜ್ಞಾನವನ್ನು ಜಾರಿಗೆ ತರುತ್ತಿದ್ದಾರೆ. ಇದೀಗ, ಎಐ (AI) ಆಧಾರಿತ ಸ್ವಯಂಚಾಲಿತ ಸಿಗ್ನಲ್ ಗಳನ್ನು ನಗರದಲ್ಲಿನ 125 ಜಂಕ್ಷನ್ ಗಳಲ್ಲಿ ಅಳವಡಿಸಲಾಗಿದೆ.
ಈ ಎಐ ಆಧಾರಿತ ಸಿಗ್ನಲ್ 24 ಗಂಟೆಗಳೂ ಕಾರ್ಯನಿರ್ವಹಿಸುತ್ತವೆ. ಇದುವರೆಗೆ 53 ಕೋಟಿ ವೆಚ್ಚದಲ್ಲಿ 125 ಜಂಕ್ಷನ್ ಗಳಲ್ಲಿ ಅಳವಡಿಸಲಾಗಿದೆ. ಒಟ್ಟು 165 ಜಂಕ್ಷನ್ನಿಗೆ ಈ ತಂತ್ರಜ್ಞಾನವನ್ನು ಬಳಸಲು ಯೋಜನೆ ರೂಪಿಸಲಾಗಿದೆ. ಸಿ-ಡಾಕ್ (C-DAC) ಕಂಪನಿಯು ಈ ವ್ಯವಸ್ಥೆಯನ್ನು ಅಳವಡಿಸಿದೆ.
ಎಐ ಸಿಗ್ನಲ್ ಗಳು ಎರಡು ಪ್ರಕಾರ
- ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ (BATCAS) – ವಾಹನ ದಟ್ಟಣೆ ಪರಿಗಣಿಸಿ ಗ್ರೀನ್ ಸಿಗ್ನಲ್ ನೀಡುವುದು.
- ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ (VAC) – ಹೆಚ್ಚು ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಕಾಲ ಗ್ರೀನ್ ಸಿಗ್ನಲ್ ನೀಡುವುದು.
ಎಐ ಸಿಗ್ನಲ್ ಉಪಯೋಗಗಳು
- ಸಂಚಾರ ಸಮಯ ಶೇ 33% ಕಡಿಮೆಯಾಗಲಿದೆ.
- ದಟ್ಟಣೆ ನಿಯಂತ್ರಣ ಪರಿಣಾಮಕಾರಿಯಾಗಿ ನಡೆಯಲಿದೆ.
- ಪೀಕ್ ಸಮಯದಲ್ಲಿ ಸಂಚಾರ ಸುಗಮವಾಗಲಿದೆ.
ಅನಗತ್ಯ ಸಂಚಾರ ಜಾಮ್ ತಪ್ಪಿಸಲಾಗುವುದು. ಈ ಹೊಸ ತಂತ್ರಜ್ಞಾನವು ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುವ ನಿರೀಕ್ಷೆಯಾಗಿದೆ.