ಓಪನ್‌ಎಐ ಮತ್ತು ಮೆಟಾ (OpenAI, Meta in talks with Reliance) ತಮ್ಮ ಎಐ ತಂತ್ರಜ್ಞಾನಗಳನ್ನು ಭಾರತದಲ್ಲಿ ವಿಸ್ತರಿಸಲು ರಿಲಯನ್ಸ್ ಜಿಯೋ ಜೊತೆ ಮಾತುಕತೆ ನಡೆಸುತ್ತಿವೆ. ಜಿಯೋ ಭಾರತದಲ್ಲಿ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿದ್ದು, ಓಪನ್‌ಎಐ ತನ್ನ ಚಾಟ್GPT ಸೇವೆಯಿಂದ ಜನಪ್ರಿಯವಾಗಿದೆ.
ಒಂದು ವರದಿ ಪ್ರಕಾರ, ಓಪನ್‌ಎಐ ತನ್ನ ಚಾಟ್GPT ಚಂದಾದಾರಿಕೆ ಯೋಜನೆಗಳನ್ನು ಅಗ್ಗ ಮಾಡಬೇಕೆಂದು ಆಲೋಚನೆ ನಡೆಸುತ್ತಿದೆ. ಆದರೆ ಈ ಕುರಿತು ರಿಲಯನ್ಸ್ ಜೊತೆ ಯಾವುದೇ ನಿರ್ದಿಷ್ಟ ಚರ್ಚೆ ನಡೆದಿದೆಯೇ ಎಂಬುದು ಸ್ಪಷ್ಟವಿಲ್ಲ.
ರಿಲಯನ್ಸ್, ಓಪನ್‌ಎಐ ಮಾದರಿಗಳನ್ನು ತನ್ನ ಉದ್ಯಮ ಗ್ರಾಹಕರಿಗೆ ಎಪಿಐ ಮೂಲಕ ನೀಡುವ ಕುರಿತು ಚರ್ಚಿಸಿದೆ. ಜೊತೆಗೆ, ಭಾರತದಲ್ಲಿ ಸ್ಥಳೀಯ ಬಳಕೆದಾರರ ಡೇಟಾ ಸಂಗ್ರಹಿಸಲು ದೇಶೀಯ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಸಹ ಯೋಜನೆ ಹೂಡಿದೆ. ಇದರಿಂದ ಭಾರತೀಯ ಬಳಕೆದಾರರ ಮಾಹಿತಿಯು ದೇಶದೊಳಗೆಯೇ ಉಳಿಯಬಹುದು.
ರಿಲಯನ್ಸ್ ಜಾಮ್ ನಗರದಲ್ಲಿ ಬೃಹತ್ ಡೇಟಾ ಸೆಂಟರ್ ನಿರ್ಮಾಣ ಮಾಡುತ್ತಿರುವುದರಿಂದ, ಅದರ ಮೂಲಕ ತನ್ನ ಎಐ ಮಾದರಿಗಳನ್ನು ಚಲಾಯಿಸಲು ಮೆಟಾ ಜೊತೆ ಚರ್ಚೆ ನಡೆಸುತ್ತಿದೆ. ಜಾಮ್ನಗರ ಡೇಟಾ ಸೆಂಟರ್ 3 GW ಸಾಮರ್ಥ್ಯ ಹೊಂದಿದ್ದು, ಇದು ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಎಐ ಡೇಟಾ ಕೇಂದ್ರಗಳಲ್ಲಿ ಒಂದಾಗಲಿದೆ.
ಈ ಡೇಟಾ ಸೆಂಟರ್ ನಿರ್ಮಾಣಕ್ಕಾಗಿ ರಿಲಯನ್ಸ್, NVIDIAಯಿಂದ ಎಐ ಸೆಮಿಕಂಡಕ್ಟರ್‌ಗಳನ್ನು ಪಡೆಯಲಿದೆ. ಇದರಿಂದ ಹೆಚ್ಚಿನ ಕಾರ್ಯಕ್ಷಮತೆಯ ಎಐ ವ್ಯವಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಗಲಿದೆ.