New Delhi: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಹೆಚ್ಚುತ್ತಿದ್ದು, ಹಲವಾರು ಕಂಪನಿಗಳು ವೆಚ್ಚ ಉಳಿಸಲು AI ಬಳಸುತ್ತಿವೆ. ಸ್ವೀಡನ್‌ನ ಕ್ಲಾರ್ನಾ ಕಂಪನಿ ತನ್ನ ಕಸ್ಟಮರ್ ಸಪೋರ್ಟ್ ವಿಭಾಗದಲ್ಲಿ ಸಂಪೂರ್ಣವಾಗಿ ಎಐ ಯಂತ್ರಗಳನ್ನು ಬಳಸಲು ನಿರ್ಧರಿಸಿತ್ತು. ಇದರಿಂದ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತು.
ಆದರೆ, ಕಂಪನಿಗೆ ಅಷ್ಟು ಉತ್ತಮ ಫಲ ಸಿಕ್ಕಿಲ್ಲ. ಗುಣಮಟ್ಟ ಕಡಿಮೆಯಾಗಿದ್ದು, ಗ್ರಾಹಕರ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಅದರಿಂದ ಈಗ ಮನುಷ್ಯರ ಕೆಲಸದ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ.
ಕ್ಲಾರ್ನಾ ಕಂಪನಿ ಈಗ ಮನುಷ್ಯರ ಗುಣಮಟ್ಟದ ಕೆಲಸಕ್ಕೆ ನಂಬಿಕೆ ಇಟ್ಟು, ಕೆಲಸಕ್ಕೆ ವರ್ಕ್ ಫ್ರಾಂ ಹೋಮ್ ಆಯ್ಕೆ ನೀಡುತ್ತಿದೆ. ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳು ಸಹ ಈ ಕೆಲಸ ಮಾಡಲು ಸಾಧ್ಯತೆ ಇದೆ. ಗ್ರಾಹಕರಿಗೆ ಎಐ ಚಾಟ್‌ಬೋಟ್ ಬದಲು ನೇರವಾಗಿ ಮನುಷ್ಯರೊಂದಿಗೆ ಮಾತಾಡಲು ಅವಕಾಶ ಕೊಡುವುದೇ ಉತ್ತಮ ಎಂದು ಕಂಪನಿ ಕಂಡುಕೊಂಡಿದೆ.
ಈಗ ಕ್ಲಾರ್ನಾ ಗ್ರೂಪ್ ನಲ್ಲಿ ಸುಮಾರು 3,000 ಉದ್ಯೋಗಿಗಳಿದ್ದಾರೆ. ಹಿಂದಿನ ವರ್ಷ 700 ಮನುಷ್ಯರ ಕೆಲಸವನ್ನು ಎಐ ಮಾಡುತ್ತಿತ್ತು, ಆದರೂ ಎಐ ಬಳಕೆಯಿಂದ ಸಂಪೂರ್ಣ ಯಶಸ್ಸು ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಮನುಷ್ಯರ ಕೆಲಸಗಳಿಗೆ ಎಐ ಬದಲಿ ಬರುವ ಸಾಧ್ಯತೆ ಕಡಿಮೆ ಎಂದು ಕಂಪನಿ ಹೇಳುತ್ತಿದೆ.