ಒರಾಕಲ್ ಮುಖ್ಯಸ್ಥ ಲ್ಯಾರಿ ಎಲಿಸನ್, (Oracle CEO Larry Ellison) ಕೃತಕ ಬುದ್ಧಿಮತ್ತೆಯ (AI) ಮೂಲಕ 48 ಗಂಟೆಗಳಲ್ಲಿ ಕ್ಯಾನ್ಸರ್ ಗೆ ಲಸಿಕೆ ಲಭ್ಯವಿರುವಂತೆ ಮಾಡಬಹುದು ಎಂದು ಹೇಳಿದ್ದಾರೆ. White Houseನಲ್ಲಿ ನಡೆದ ಸಭೆಯಲ್ಲಿ, SoftBank ಸಿಇಒ ಮಸಯೋಶಿ ಸನ್ ಮತ್ತು OpenAI CEO Sam Altman ಜೊತೆ ಮಾತನಾಡಿದ ಅವರು, ಈ ಕುರಿತು ಮಾಹಿತಿ ನೀಡಿದರು.
ಎಲಿಸನ್ ವಿವರಿಸಿದಂತೆ, ಕ್ಯಾನ್ಸರ್ ಗಡ್ಡೆಗಳ ಸಣ್ಣ ತುಣುಕುಗಳು ರಕ್ತದಲ್ಲಿ ತೇಲುತ್ತವೆ. ಎಐ ತಂತ್ರಜ್ಞಾನದ ಸಹಾಯದಿಂದ ರಕ್ತ ಪರೀಕ್ಷೆಯಲ್ಲಿ ಆರಂಭಿಕ ಕ್ಯಾನ್ಸರ್ ಪತ್ತೆ ಮಾಡಲು ಸಾಧ್ಯ. ಇದು ಕ್ಯಾನ್ಸರ್ ಚಿಕಿತ್ಸೆಗಾಗಿ ಮಹತ್ತರ ಮೆಟ್ಟಿಲಾಗಿದೆ.
ಕ್ಯಾನ್ಸರ್ ಗಡ್ಡೆಯನ್ನು ಜೀನ್ ಅನುಕ್ರಮದ ಮೂಲಕ ವಿಶ್ಲೇಷಿಸಿದ ನಂತರ, ಅದರ ವಿರುದ್ಧ ಲಸಿಕೆ ಅಭಿವೃದ್ಧಿ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಎಐ ತ್ವರಿತಗೊಳಿಸುವುದರಿಂದ, 48 ಗಂಟೆಗಳಲ್ಲಿ ಲಸಿಕೆ ಲಭ್ಯವಾಗಬಹುದು.
OpenAI, SoftBank ಮತ್ತು Oracle ಜಂಟಿಯಾಗಿ “ಸ್ಟಾರ್ಗೇಟ್” ಯೋಜನೆ ಪ್ರಾರಂಭಿಸುತ್ತಿವೆ. ಈ ಯೋಜನೆಯು 100 ಶತಕೋಟಿ ಡಾಲರ್ ಹೂಡಿಕೆಯಿಂದ 100,000 ಉದ್ಯೋಗಗಳನ್ನು ಸೃಷ್ಟಿಸಲು ಉದ್ದೇಶಿಸಿದೆ. ಟೆಕ್ಸಾಸ್ ನಲ್ಲಿ ಮೊದಲ ಡೇಟಾ ಸೆಂಟರ್‌ಗಳು ನಿರ್ಮಾಣ ಹಂತದಲ್ಲಿವೆ. ಇವು ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳನ್ನು ವಿಶ್ಲೇಷಿಸಿ, ವೈದ್ಯರಿಗೆ ರೋಗಿಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡಲಿವೆ.
ಕ್ಯಾನ್ಸರ್ ಪತ್ತೆ, ನಿರ್ದಿಷ್ಟ ಲಸಿಕೆ ಅಭಿವೃದ್ಧಿ, ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಎಐ ದೊಡ್ಡ ಪ್ರಭಾವ ಬೀರುವ ಭವಿಷ್ಯವಿದೆ ಎಂದು ಎಲಿಸನ್ ಹೇಳಿದ್ದಾರೆ.