back to top
26.3 C
Bengaluru
Friday, July 18, 2025
HomeIndiaAir India Plane Crash: ಕಾರಣ ಪತ್ತೆ ಮಾಡಲು ಉನ್ನತ ಸಮಿತಿ ರಚನೆ

Air India Plane Crash: ಕಾರಣ ಪತ್ತೆ ಮಾಡಲು ಉನ್ನತ ಸಮಿತಿ ರಚನೆ

- Advertisement -
- Advertisement -

ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ (Air India plane crash) ಕುರಿತು ಕಾರಣ ಪತ್ತೆಹಚ್ಚಲು ಹಾಗೂ ಭವಿಷ್ಯದಲ್ಲಿ ಇಂತಹ ಅನಾಹುತಗಳು ಮತ್ತೊಮ್ಮೆ ಸಂಭವಿಸದಂತೆ ತಡೆಯುವ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಈ ಸಮಿತಿಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ನೇತೃತ್ವದಲ್ಲಿ ರಚಿಸಲಾಗಿದೆ. ಈ ಸಮಿತಿಯಲ್ಲಿ ನಾಗರಿಕ ವಿಮಾನಯಾನ ಇಲಾಖೆ, ಗೃಹ ಸಚಿವಾಲಯ, ಗುಜರಾತ್ ಗೃಹ ಇಲಾಖೆ, ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಭಾರತೀಯ ವಾಯುಪಡೆ ಹಾಗೂ ವಿಮಾನ ಭದ್ರತಾ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಸಂಘಟಿತ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಮತ್ತು ನೆರೆದ ಸ್ಥಳದಲ್ಲಿ ಇದ್ದವರು ಸೇರಿ ಒಟ್ಟಿಗೆ 265ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬೋಯಿಂಗ್ 787-8 ಮಾದರಿಯ ವಿಮಾನವು ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್ ಕಡೆಗೆ ಹೊರಟಿತ್ತು. ಆದರೆ ಟೇಕ್‌ಆಫ್ ಆದ ಕೆಲವೇ ಕ್ಷಣದಲ್ಲಿ ಅದು ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೇ ಅಪ್ಪಳಿಸಿತು.

ಈ ಪ್ರಕರಣದ ಬಗ್ಗೆ ಈಗಾಗಲೇ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ನಡೆಸುತ್ತಿದೆ. ಇನ್ನು ಸರ್ಕಾರ ರಚಿಸಿದ ಸಮಿತಿ ತನಿಖಾ ವರದಿಯನ್ನು ಮೂರು ತಿಂಗಳಲ್ಲಿ ಸಲ್ಲಿಸಬೇಕಿದೆ. ಈ ಸಮಿತಿ ಭವಿಷ್ಯದಲ್ಲಿ ವಿಮಾನ ಅಪಘಾತಗಳನ್ನು ತಡೆಯಲು ಅಗತ್ಯವಾದ ಕ್ರಮಗಳು ಹಾಗೂ ಮಾರ್ಗಸೂಚಿಗಳನ್ನು ರೂಪಿಸುವುದರತ್ತ ಗಮನಹರಿಸಲಿದೆ.

ಆದೇಶದ ಪ್ರಕಾರ, ತಜ್ಞರು, ಕಾನೂನು ಸಲಹೆಗಾರರು ಮತ್ತು ಇನ್ನಿತರ ಅಗತ್ಯವಿರುವ ಸದಸ್ಯರನ್ನು ಈ ಸಮಿತಿಗೆ ಸೇರಿಸಬಹುದು. ರಕ್ಷಣಾ ಕಾರ್ಯಾಚರಣೆಗಳು, ತುರ್ತು ಪರಿಸ್ಥಿತಿಗಳ ನಿರ್ವಹಣೆ ಮತ್ತು ಇತರ ಸಂಸ್ಥೆಗಳ ಸಹಕಾರವನ್ನು ಪರಿಶೀಲಿಸಿ ಸಮಿತಿ ವರದಿ ಸಲ್ಲಿಸಲಿದ್ದು, ಹಳೆಯ ವಿಮಾನ ದುರಂತಗಳ ದಾಖಲೆಗಳನ್ನೂ ಅಧ್ಯಯನ ಮಾಡಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page