back to top
27 C
Bengaluru
Friday, July 18, 2025
HomeBusinessIndia ದಲ್ಲೇ Aircraft ತಯಾರಿಕೆಗೆ ಆಲೋಚನೆ: ಭಾರತ ಸರ್ಕಾರ

India ದಲ್ಲೇ Aircraft ತಯಾರಿಕೆಗೆ ಆಲೋಚನೆ: ಭಾರತ ಸರ್ಕಾರ

- Advertisement -
- Advertisement -

New Delhi: ಭಾರತವು ವಿಮಾನ (Aircraft) ತಯಾರಿಕೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಬೇಕೆಂಬ ಗುರಿಯನ್ನು ಸರ್ಕಾರ ಇಟ್ಟಿದೆ. ಭಾರತದಲ್ಲಿ ಈಗಾಗಲೇ HAL​ನಿಂದ ಸಣ್ಣ ಮಟ್ಟದಲ್ಲಿ ನಾಗರಿಕ ವಿಮಾನಗಳ (Civil aircraft) ತಯಾರಿಕೆ ನಡೆಯುತ್ತಿದೆ.

ಆದರೆ, ಅವು ಬಹಳ ಹಗುರ ವಿಮಾನಗಳು ಮಾತ್ರ. ಬೋಯಿಂಗ್, ಏರ್​ಬಸ್ (Boeing and Airbus) ಕಂಪನಿಗಳ ರೀತಿಯಲ್ಲಿ ಪೂರ್ಣ ವಿಮಾನಗಳ ನಿರ್ಮಿಸುವ ಕೆಲಸ ಭಾರತದಲ್ಲಿ ನಡೆಯಬೇಕು ಎಂಬುದು ಸರ್ಕಾರ ಪ್ಲಾನ್ ಹಾಕಿದೆ.

ಸದ್ಯ ಭಾರತದಲ್ಲಿ ವಿಮಾನಗಳ ಬಿಡಿಭಾಗಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಡಿಸೈನ್​ನಿಂದ ಹಿಡಿದು ಪೂರ್ಣ ತಯಾರಿಕೆವರೆಗೂ ಎಲ್ಲವನ್ನೂ ಭಾರತದಲ್ಲೇ ಮಾಡಲು ಯೋಜಿಸಲಾಗಿದೆ.

ಯೂರೋಪ್​ನ ಏರ್​ಬಸ್ ಮತ್ತು ಅಮೆರಿಕದ ಬೋಯಿಂಗ್ ಈ ವಿಶ್ವದಲ್ಲಿ ವಿಮಾನ ತಯಾರಿಸುವ ಎರಡು ಪ್ರಮುಖ ಸಂಸ್ಥೆಗಳು. ಏರ್​ಬಸ್ ಸಂಸ್ಥೆ ಭಾರತದಲ್ಲಿ ತನ್ನ ಸಿ295 ಮಿಲಿಟರಿ ಸಾರಿಗೆ ವಿಮಾನ ಮತ್ತು ಎಚ್125 ಸಿವಿಲ್ ಹೆಲಿಕಾಪ್ಟರುಗಳನ್ನು ತಯಾರಿಸಲು ಅಂಗಸಂಸ್ಥೆಗಳನ್ನು ಸ್ಥಾಪಿಸಿದೆ.

ವಿಮಾನದ ಬಿಡಿಭಾಗಗಳನ್ನು ಭಾರತದಲ್ಲಿ ಅದು ತಯಾರಿಸುವ ಕೆಲಸ ಮಾಡುತ್ತಿದೆ. ಆದರೆ, ನಾಗರಿಕ ವಿಮಾನಗಳನ್ನು, ಅಂದರೆ ರೆಗ್ಯುಲರ್ ವಿಮಾನಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲು ಅದಿನ್ನೂ ಯಾವ ಯೋಜನೆ ಹಾಕಿಲ್ಲ.

ಇತ್ತೀಚೆಗೆ ನಡೆದ ಏರ್​ಬಸ್​ನ ದಕ್ಷಿಣ ಏಷ್ಯಾ ಮುಖ್ಯಕಚೇರಿ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವ ರಾಮಮೋಹನ್ ನಾಯ್ಡು, ‘ಭಾರತದಲ್ಲಿ ನಾಗರಿಕ ವಿಮಾನಗಳ ತಯಾರಿಕೆ ಆಗಲೆಂದು ನಿರೀಕ್ಷಿಸುತ್ತಿದ್ದೇವೆ. ಇದರಲ್ಲಿ ಏರ್​ಬಸ್ ದೊಡ್ಡ ಪಾತ್ರ ವಹಿಸಬಹುದು.

ವಿಮಾನ ಬಿಡಿಭಾಗಗಳ ತಯಾರಿಕೆಯಲ್ಲಿ ಏರ್​ಬಸ್ ಸ್ವಲ್ಪ ತೊಡಗಿಸಿಕೊಂಡಿದೆ. ಆದರೆ, ವಿಮಾನದ ಡಿಸೈನ್ ಮತ್ತು ತಯಾರಿಕೆ ಇಲ್ಲೇ ಆಗಬೇಕು’ ಎಂದು ಹೇಳಿದ್ದಾರೆ.

ಭಾರತದಲ್ಲಿ ವಿಮಾನಗಳ ವಿನ್ಯಾಸ ಮತ್ತು ತಯಾರಿಕೆಗೆ ಅನುವು ಮಾಡಿಕೊಡುವಂತಹ ಕಾನೂನುಗಳಿರುವ ಭಾರತೀಯ ವಾಯುಯಾನ ವಿಧೇಯಕ ಮಸೂದೆಯನ್ನು ಆಗಸ್ಟ್ ತಿಂಗಳಲ್ಲಿ ಮಂಡಿಸಲಾಗಿತ್ತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page