Belize: ವಿಮಾನ ಹೈಜಾಕ್ (Airplane Hijack) ಮಾಡಲು ಚಾಕು ತೋರಿಸಿದ 49 ವರ್ಷದ ಅಮೆರಿಕದ ಪ್ರಜೆ ಅಕಿನ್ಯೆಲಾ ಸಾವಾ ಟೇಲರ್ ಅವರನ್ನು, ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕನು ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸ್ಯಾನ್ ಪೆಡ್ರೋಗೆ ತೆರಳುತ್ತಿದ್ದ ವಿಮಾನದೊಳಗೆ ನಡೆಯಿತು.
ಟೇಲರ್ ಅವರು ಏಕಾಏಕಿ ಚಾಕು ಹಿಡಿದು ಪ್ರಯಾಣಿಕರ ಮೇಲೆ ದಾಳಿ ಮಾಡಲು ಆರಂಭಿಸಿದಾಗ, ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕನು ತನ್ನ ಬಳಿ ಪರವಾನಗಿ ಹೊಂದಿದ ಪಿಸ್ತೂಲಿನಿಂದ ತಕ್ಷಣ ಪ್ರತಿಕ್ರಿಯೆ ತೋರಿಸಿ ಗುಂಡು ಹಾರಿಸಿದರು. ಆ ಗುಂಡೇಟಿನಿಂದ ಟೇಲರ್ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಘಟನೆದಲ್ಲಿ ಮೂವರು ಗಾಯಗೊಂಡಿದ್ದಾರೆ.
ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ಅವರು, ಗುಂಡು ಹಾರಿಸಿದ ಪ್ರಯಾಣಿಕನ ಧೈರ್ಯವನ್ನು ಶ್ಲಾಘಿಸಿ “ಅವರು ಹೀರೋ” ಎಂದು ಪ್ರಶಂಸಿಸಿದರು. ಟೇಲರ್ ಅವರು ಚಾಕುವನ್ನು ಹೇಗೆ ವಿಮಾನದಲ್ಲಿ ತಂದುಕೊಂಡು ಬಂದರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತ ತನಿಖೆ ನಡೆಯುತ್ತಿದೆ.
ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಬೆಲೀಜ್ ಅಧಿಕಾರಿಗಳು ತನಿಖೆಗೆ ಸಹಕಾರ ಕೇಳಿದ್ದಾರೆ. ಟೇಲರ್ ಅವರು ಈ ವಾರದ ಆರಂಭದಲ್ಲಿ ಬೆಲೀಜ್ಗೆ ಬಂದಿದ್ದು, ಆದರೆ ವಾರಾಂತ್ಯದಲ್ಲಿ ದೇಶ ಪ್ರವೇಶ ನಿರಾಕರಿಸಲಾಗಿತ್ತಂತೆ.
ಬೆಲೀಜ್ ಒಂದು ಸಣ್ಣ ಮಧ್ಯ ಅಮೆರಿಕದ ರಾಷ್ಟ್ರವಾಗಿದ್ದು, 2023ರ ಅಂಕಿಅಂಶಗಳ ಪ್ರಕಾರ ಸುಮಾರು 4.1 ಲಕ್ಷ ಜನಸಂಖ್ಯೆ ಹೊಂದಿದೆ. ಇದರಲ್ಲಿಯೂ ಹೆಚ್ಚಿನವರು ಮೆಸ್ಟಿಜೋ, ಕ್ರಿಯೋಲ್, ಮಾಯಾ ಮತ್ತು ಗರಿಫುನಾ ಜನಾಂಗಗಳಿಗೆ ಸೇರಿದ್ದಾರೆ. ಕ್ರಿಶ್ಚಿಯನ್ ಧರ್ಮ ಪ್ರಬಲವಾಗಿದ್ದು, ಸುಮಾರು 80% ಜನರು ಕ್ರಿಶ್ಚಿಯನ್ನರು.
ಹೆಚ್ಚು ಜನರು ಬೆಲೀಜ್ ನಗರದಲ್ಲಿ ವಾಸಿಸುತ್ತಾರೆ ಮತ್ತು ಇದು ಮಧ್ಯ ಅಮೆರಿಕದ ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದು.