ಅಮೆಜಾನ್ ತನ್ನ ಪ್ರಾಜೆಕ್ಟ್ ಕೈಪರ್ ಅಡಿಯಲ್ಲಿ (Amazon Kuiper Satellites) ಮೊದಲ ಬ್ಯಾಚ್ ಉಪಗ್ರಹಗಳನ್ನು ಇತ್ತೀಚೆಗೆ ಉಡಾವಣೆಯ ಮಾಡಿದ್ದು, ಇವು ಭೂಮಿಯ ಕೆಳ ಕಕ್ಷೆಯಲ್ಲಿ ಹೈ ಸ್ಪೀಡ್ ಹಾಗೂ ಲೋ-ಲೆಟೆನ್ಸಿ Internet ಸೇವೆಯನ್ನು ಒದಗಿಸಲು ಬಳಸಲಾಗುತ್ತದೆ. ಈ ಸೇವೆ ಇತ್ತೀಚೆಗೆ ಪ್ರಾರಂಭಿಸಿದ ಎಲೋನ್ ಮಸ್ಕ್ ಅವರ Starlink ಗೆ ಕಠಿಣ ಸ್ಪರ್ಧೆಯಾಗಲಿದೆ.
ಯುನೈಟೆಡ್ ಲಾಂಚ್ ಅಲೈಯನ್ಸ್ ಅಟ್ಲಾಸ್ V ರಾಕೆಟ್ ಮೂಲಕ 27 ಕೈಪರ್ ಉಪಗ್ರಹಗಳನ್ನು ಅಮೆಜಾನ್ ಕಕ್ಷೆಗೆ ಹಾರಿಸಿತು. ಎಪ್ರಿಲ್ 29 ರಂದು ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 4:31 ಕ್ಕೆ ಈ ಉಪಗ್ರಹಗಳು ಕಕ್ಷೆಗೆ ಸೇರಿದವು. ಇದು ಪ್ರಾಜೆಕ್ಟ್ ಕೈಪರ್‌ನ ವಾಣಿಜ್ಯ ಸೇವೆ ಪ್ರಾರಂಭವಾಗುವ ಮೊದಲ ಹೆಜ್ಜೆ.
ಅಮೆಜಾನ್ ಪ್ರಾಜೆಕ್ಟ್ ಕೈಪರ್‌ನ್ನು ವಿಶ್ವಾದ್ಯಾಂತ Internet ಲಭ್ಯತೆಯನ್ನು ಸುಧಾರಿಸಲು ರೂಪಿಸಿದೆ. ಇದರ ಉದ್ದೇಶ ಭೂಮಿಯ ಕೆಳ ಕಕ್ಷೆಯಲ್ಲಿ ಹಲವಾರು ಉಪಗ್ರಹಗಳನ್ನು ನಿಯೋಜಿಸಿ, ದೂರದ ಪ್ರದೇಶಗಳಲ್ಲಿ ತ್ವರಿತ ಮತ್ತು ಕಡಿಮೆ ವಿಳಂಬದ ಇಂಟರ್ನೆಟ್ ಸೇವೆಗಳನ್ನು ಒದಗಿಸುವುದು.
ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಕಂಪನಿಯು 2019ರಿಂದ 8,000 ಕ್ಕೂ ಹೆಚ್ಚು Starlink ಉಪಗ್ರಹಗಳನ್ನು ಉಡಾವಣೆಯನ್ನೇ ಮಾಡಿದೆ. 7,000 ಕ್ಕೂ ಹೆಚ್ಚು Starlink ಈಗ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಮೆಜಾನ್ 2026ರ ಮಧ್ಯಭಾಗದ ವೇಳೆಗೆ 3,236 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸಿದೆ, ಇದು ಪ್ರಪಂಚಾದ್ಯಾಂತ ವೇಗವಾದ Internet ಸೇವೆಗಳನ್ನು ಒದಗಿಸುತ್ತದೆ.