Koppal: ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಜನ್ಮಸ್ಥಳ ಕುರಿತ ಪೂಜಾ ವಿವಾದದಲ್ಲಿ, (Anjanadri hill worship controversy) ಸುಪ್ರೀಂ ಕೋರ್ಟ್ (Supreme Court) ನೀಡಿದ ಆದೇಶವನ್ನು ಜಿಲ್ಲಾಡಳಿತ ಪಾಲಿಸದ ಹಿನ್ನೆಲೆಯಲ್ಲಿ, ಡಿಸಿ ಸುರೇಶ್ ಇಟ್ನಾಳ್ ಅವರಿಗೆ ಆಗಸ್ಟ್ 11ರಂದು ಆನ್ಲೈನ್ ಮೂಲಕ ವಿಚಾರಣೆಗೆ ಹಾಜರಾಗಲು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಇತ್ತೀಚೆಗೆ ಅರ್ಚಕ ವಿದ್ಯಾದಾಸ್ ಬಾಬಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಈ ತೀರ್ಮಾನ ತೆಗೆದುಕೊಂಡರು.
ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನದಲ್ಲಿ, ಸುಪ್ರೀಂ ಕೋರ್ಟ್ ವಿದ್ಯಾದಾಸ್ ಬಾಬಾರಿಗೆ ಪೂಜೆಗೆ ಅವಕಾಶ ನೀಡಬೇಕು ಎಂಬ ಮಧ್ಯಂತರ ಆದೇಶ ನೀಡಿತ್ತು. ಜೊತೆಗೆ ಅವರಿಗೆ ಮೂಲ ಸೌಲಭ್ಯಗಳೊಂದಿಗೆ ಒಂದು ಕೊಠಡಿ ಒದಗಿಸಬೇಕು ಎಂದು ತಿಳಿಸಿತ್ತು.
ಆದರೆ ಇತ್ತೀಚೆಗಷ್ಟೆ ಡಿಸಿ ಅಂಜನಾದ್ರಿಗೆ ಭೇಟಿ ನೀಡಿದಾಗ, ವಿದ್ಯಾದಾಸ್ ಬಾಬಾ ಅಲ್ಲದೆ ಬೇರೆ ಅರ್ಚಕರು ಪೂಜೆಯನ್ನು ನಡೆಸಿದ್ದರು. ಇದನ್ನು ವಿದ್ಯಾದಾಸ್ ಬಾಬಾ ವಿರೋಧಿಸಿದರು.
ಹುಂಡಿ ಕುರಿತಂತೆ ವಿದ್ಯಾದಾಸ್ ಬಾಬಾ ಮತ್ತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ರಾವ್ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.
ಇವುಗಳ ಹಿನ್ನೆಲೆಯಲ್ಲಿ, ವಕೀಲ ವಿಷ್ಣು ಶಂಕರ್ ಜೈನ್ ಅವರು ಅರ್ಚಕರ ಪರವಾಗಿ ವಾದ ನಡೆಸಿದರು.