back to top
22.6 C
Bengaluru
Wednesday, June 18, 2025
HomeNewsಅಂತಾರಾಷ್ಟ್ರೀಯವಾಗಿ Modi ಗೆ ಮತ್ತೊಂದು ಗೌರವ: Cyprus ದೇಶದಿಂದ ಪ್ರಶಸ್ತಿ

ಅಂತಾರಾಷ್ಟ್ರೀಯವಾಗಿ Modi ಗೆ ಮತ್ತೊಂದು ಗೌರವ: Cyprus ದೇಶದಿಂದ ಪ್ರಶಸ್ತಿ

- Advertisement -
- Advertisement -

Nicosia (Cyprus): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸೈಪ್ರಸ್ (Cyprus) ದೇಶವು ತನ್ನ ಅತ್ಯುನ್ನತ ನಾಗರಿಕ ಗೌರವವಾದ “ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III” (Grand Cross of the Order of Makarios III) ಎಂಬ ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯನ್ನು ಸೈಪ್ರಸ್‌ನ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಸೋಮವಾರ ನೀಡಿ ಗೌರವಿಸಿದರು.

ಈ ಪ್ರಶಸ್ತಿ, ಸೈಪ್ರಸ್‌ನ ಮೊದಲ ಅಧ್ಯಕ್ಷ ಮಕರಿಯೋಸ್ III ಅವರ ಹೆಸರಿನಲ್ಲಿ ನೀಡಲಾಗುತ್ತದೆ. ಮೋದಿ ಅವರು ಈ ಗೌರವವನ್ನು ಭಾರತ ಮತ್ತು ಸೈಪ್ರಸ್ ನಡುವೆ ಇರುವ ಸ್ನೇಹದ ಸಂಕೇತ ಎಂದು ಗುರುತಿಸಿದರು. “ಈ ಗೌರವವನ್ನು ನಾನು ಭಾರತದ 140 ಕೋಟಿ ಜನರಿಗೆ ಅರ್ಪಿಸುತ್ತೇನೆ,” ಎಂದು ಅವರು ಹೇಳಿದರು.

ಮೋದಿಯವರ ಮಾತುಗಳಲ್ಲಿ, “ಭವಿಷ್ಯದಲ್ಲಿ ಭಾರತ ಮತ್ತು ಸೈಪ್ರಸ್ ನಡುವೆ ಇನ್ನಷ್ಟು ಬಲಿಷ್ಠ ಸಹಕಾರ ನಡೆಯುತ್ತದೆ. ನಾವು ಶಾಂತಿ ಮತ್ತು ಭದ್ರತೆಯ ಜಗತ್ತನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸೋಣ,” ಎಂಬ ಆಶಯ ವ್ಯಕ್ತವಾಯಿತು.

22 ರಾಷ್ಟ್ರಗಳಿಂದ ಪ್ರಶಸ್ತಿ ಪಡೆದ ಮೋದಿ: ಪ್ರಧಾನಿಯಾಗಿ 11 ವರ್ಷಗಳಲ್ಲಿ ಮೋದಿ ಹಲವಾರು ದೇಶಗಳಿಗೆ ಭೇಟಿನೀಡಿದ್ದು, ಅಲ್ಲಿ ಹಲವಾರು ರಾಷ್ಟ್ರಗಳು ತಮ್ಮ ಅತ್ಯುನ್ನತ ಗೌರವಗಳನ್ನು ಅವರಿಗೆ ನೀಡಿ ಗೌರವಿಸಿವೆ. ಮೊದಲು 2016 ರಲ್ಲಿ ಸೌದಿ ಅರೇಬಿಯಾದಿಂದ ಪ್ರಶಸ್ತಿಯನ್ನು ಪಡೆದ ಅವರು, ಈಗಾಗಲೇ 22 ದೇಶಗಳಿಂದ ಅಂತಹ ಗೌರವ ಸ್ವೀಕರಿಸಿದ್ದಾರೆ.

ಈ ವರ್ಷ 2025ರಲ್ಲೇ ಮೋದಿ ಅವರಿಗೆ ಸೈಪ್ರಸ್ ನೀಡಿದ ಪ್ರಶಸ್ತಿ ಮೂರನೆಯದು. ಈ ಹಿಂದೆ ಮಾರಿಷಸ್ ಮತ್ತು ಶ್ರೀಲಂಕಾ ದೇಶಗಳು ಗೌರವಿಸಿದ್ದರು.

ಪ್ರಸ್ತುತ ಮೂರು ದೇಶಗಳ ಪ್ರವಾಸದಲ್ಲಿರುವ ಮೋದಿ, ಸೈಪ್ರಸ್ ಬಳಿಕ G7 ಶೃಂಗಸಭೆಗಾಗಿ ಕೆನಡಾಕ್ಕೆ ಹೋಗಲಿದ್ದಾರೆ. ಅಲ್ಲಿಂದ ಕ್ರೊಯೇಷಿಯಾ ಮೂಲಕ ಭಾರತಕ್ಕೆ ಮರಳಲಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page