Washington: ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುತ್ತಿರುವ ಜನರನ್ನು ಗಡಿಪಾರ ಮಾಡಲು ಮುಂದಾಗಿರುವ ಟ್ರಂಪ್ ಸರ್ಕಾರ, ಇತ್ತೀಚೆಗೆ 10 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 17 ವಲಸೆ ನ್ಯಾಯಾಧೀಶರನ್ನು ವಜಾ ಮಾಡಿದೆ.
ಇವರು ವಲಸಿಗರವರಿಗೆ ನ್ಯಾಯ ನೀಡುವವರೆಂದು, ಹಲವರು ಕಾನೂನು ಮೂಲಕ ದೇಶದಲ್ಲೇ ಉಳಿಯಲು ಈ ನ್ಯಾಯಾಲಯಗಳ ಮೊರೆ ಹೋಗುತ್ತಿದ್ದರು. ಆದರೆ ಇಂತಹ ನ್ಯಾಯಾಧೀಶರನ್ನು ಕಾರಣವಿಲ್ಲದೇ ವಜಾ ಮಾಡಲಾಗಿದೆ ಎಂಬುದು ಚಿಂತೆಗೆ ಕಾರಣವಾಗಿದೆ.
ಮಾಡಿದ ರಾಜ್ಯಗಳು: ಕ್ಯಾಲಿಫೋರ್ನಿಯಾ, ಇಲಿನಾಯ್ಸ್, ಲೂಸಿಯಾನಾ, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ನ್ಯೂಯಾರ್ಕ್, ಓಹಿಯೋ, ಟೆಕ್ಸಾಸ್, ಉತಾಹ್ ಮತ್ತು ವರ್ಜೀನಿಯಾ.
ಒಕ್ಕೂಟದ ಹೇಳಿಕೆ
- ಜುಲೈ 11ರಂದು 15 ಜನ, ಜುಲೈ 15ರಂದು ಇಬ್ಬರನ್ನು ವಜಾ ಮಾಡಲಾಗಿದೆ.
- ಈ ನಿರ್ಧಾರದಿಂದ ವಲಸೆ ನ್ಯಾಯಾಲಯಗಳಲ್ಲಿ ಈಗಾಗಲೇ ಇದ್ದ 3.5 ಮಿಲಿಯನ್ ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬ ಉಂಟಾಗಲಿದೆ.
- ಹೊಸ ನ್ಯಾಯಾಧೀಶರನ್ನು ನೇಮಿಸಿ ತರಬೇತಿ ನೀಡಲು ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ.
- ವಜಾ ನಿರ್ಧಾರವು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಂತಾರಾಷ್ಟ್ರೀಯ ವೃತ್ತಿಪರ ಎಂಜಿನಿಯರ್‌ಗಳ ಒಕ್ಕೂಟದ ಅಧ್ಯಕ್ಷ ಮ್ಯಾಟ್ ಬಿಗ್ಸ್ ಆರೋಪಿಸಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಟ್ರಂಪ್ ಆಡಳಿತ 103ಕ್ಕೂ ಹೆಚ್ಚು ನ್ಯಾಯಾಧೀಶರನ್ನು ವಜಾ ಮಾಡಿದೆ ಅಥವಾ ಕೆಲವರು ರಾಜೀನಾಮೆ ನೀಡಿದ್ದಾರೆ.
ವಲಸಿಗರಿಗೆ ನ್ಯಾಯ ನೀಡುವ ವ್ಯವಸ್ಥೆಯನ್ನೇ ಕುಗ್ಗಿಸುವ ಕೆಲಸವನ್ನು ಟ್ರಂಪ್ ಸರ್ಕಾರ ಕೈಗೆತ್ತಿಕೊಂಡಿದೆ ಎಂಬ ಆಕ್ಷೇಪ ಉದ್ಭವವಾಗಿದ್ದು, ಈ ಕ್ರಮದಿಂದ ಅಮೆರಿಕದ ವಲಸೆ ನ್ಯಾಯವ್ಯವಸ್ಥೆಯ ಭವಿಷ್ಯ ಪ್ರಶ್ನಾರ್ಧಕವಾಗಿದೆ.