back to top
20.2 C
Bengaluru
Saturday, July 19, 2025
HomeNewsTrump ವಿರೋಧಿಸುವವರು ಇಲ್ಲಿಗೆ ಬನ್ನಿ, ಕೇವಲ ₹84 ಕ್ಕೆ ಮನೆ ಕೊಳ್ಳಲು ಅವಕಾಶ!

Trump ವಿರೋಧಿಸುವವರು ಇಲ್ಲಿಗೆ ಬನ್ನಿ, ಕೇವಲ ₹84 ಕ್ಕೆ ಮನೆ ಕೊಳ್ಳಲು ಅವಕಾಶ!

- Advertisement -
- Advertisement -

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಜಯ ಸಾಧಿಸಿದ್ದು ವಿಶ್ವಾದ್ಯಂತ ಚರ್ಚೆಗೆ ಕಾರಣವಾಗಿದೆ. ಅವರ ಜಯದ ನಂತರ ಕೆಲವರು ಸಂತೋಷ ಪಡುತ್ತಿದ್ದರೆ, ಕೆಲವರು ಇನ್ನೂ ಹೆಚ್ಚು ವಿರೋಧ ತೋರಿಸುತ್ತಿದ್ದಾರೆ.

ಈ ನಡುವೆ, Italy ಯ ಒಂದು ಗ್ರಾಮ ಟ್ರಂಪ್ ವಿರೋಧಿಗಳಿಗೆ ವಿಶೇಷ ಆಫರ್ ನೀಡುತ್ತಿದೆ. ಮೆಡಿಟರೇನಿಯನ್ ಸಮುದ್ರದ ಸೊಬಗು ಹೊತ್ತ ಸಾರ್ಡಿನಿಯಾ ದ್ವೀಪದ ಓಲೋಲೈ ಗ್ರಾಮ ಕೇವಲ ₹84 (ಒಂದು ಯೂರೋ) ಗೆ ಮನೆ ನೀಡುವುದಾಗಿ ಘೋಷಿಸಿದೆ.

ಗ್ರಾಮವು ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಈ ಆಫರ್ ನೀಡಿದ್ದು, ಅಲ್ಲಿ ಕೇವಲ 1,150 ಜನರು ವಾಸಿಸುತ್ತಿದ್ದಾರೆ.

“ಜಾಗತಿಕ ರಾಜಕೀಯದಿಂದ ಬೇಸತ್ತಿರುವವರು, ಇಲ್ಲಿಗೆ ಬನ್ನಿ ಮತ್ತು ನಿಮ್ಮ ಜೀವನವನ್ನು ಸುಧಾರಿಸಿ” ಎಂದು ಅವರು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.

ಈ ಆಫರ್ ಮಾತ್ರವಲ್ಲ, ಫ್ಲೋರಿಡಾದ ಹಡಗು ಕಂಪನಿಯೊಂದು ನಾಲ್ಕು ವರ್ಷಗಳ ಕಾಲ 140 ದೇಶಗಳ 425 ಬಂದರುಗಳನ್ನು ಭೇಟಿ ಮಾಡುವ ಅವಕಾಶವನ್ನು ನೀಡುತ್ತಿದೆ.

ಈ ಪ್ರಯಾಣದಲ್ಲಿ, ಟ್ರಂಪ್ ಅಧಿಕಾರದಿಂದ ದೂರವಿರಲು ಆಸಕ್ತರಾಗಿ ಇರುವವರಿಗೆ ಹೊಸ ಅನುಭವಗಳನ್ನು ನೀಡಲು ಉದ್ದೇಶಿಸಲಾಗಿದೆ.

ನೀವು ಜಾಗತಿಕ ರಾಜಕೀಯದಿಂದ ಹೊರತಾಗಿ ಶಾಂತ ಜೀವನವನ್ನು ಹುಡುಕುತ್ತಿದ್ದೀರಾ? ಈ ಆಫರ್, ಎಂದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page