ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್ ಹೊಸ ಕ್ರಾಂತಿ ಸೃಷ್ಟಿಸಲಿದೆ! ಮಾರುಕಟ್ಟೆಯಲ್ಲಿ ಅನೇಕ ಮೊಬೈಲ್ ಬ್ರಾಂಡ್‌ಗಳು ಇದ್ದರೂ, ಐಫೋನ್ ಎಂದರೆ ಪ್ರತ್ಯೇಕ ಹೆಸರಾಗಿದೆ. ಈಗಾಗಲೇ ಅನೇಕ ಕಂಪನಿಗಳು ಫೋಲ್ಡಬಲ್ (Apple Foldable iPhone) ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದರೂ, ಆಪಲ್ ಮಾತ್ರ ತನ್ನ ಮಡಚಬಹುದಾದ ಮೊಬೈಲ್‌ನ್ನು ಇನ್ನೂ ಪರಿಚಯಿಸಿಲ್ಲ. ಆದರೆ, ಮುಂದಿನ ವರ್ಷ ಆಪಲ್ ತನ್ನ ಮೊದಲ ಫೋಲ್ಡಬಲ್ ಐಫೋನ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.
ಪ್ರಸ್ತುತ, ಫೋಲ್ಡಬಲ್ ಫೋನ್‌ಗಳ ಜಗತ್ತಿನಲ್ಲಿ ಸ್ಯಾಮ್ಸಂಗ್ ಪ್ರಭಾವ ಬೀರುತ್ತಿದ್ದು, ಶೇ. 56 ರಷ್ಟು ಬಳಕೆದಾರರನ್ನು ಹೊಂದಿದೆ. ಈ ಹಿನ್ನಲೆಯಲ್ಲಿ, ಆಪಲ್ ತನ್ನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಉತ್ಪಾದನೆಗೆ ತಯಾರಿ ನಡೆಸುತ್ತಿದೆ. ಈ ಹೊಸ ಆವಿಷ್ಕಾರದಿಂದ ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್ ಮತ್ತೊಮ್ಮೆ ಹೊಸ ತರಂಗ ಸೃಷ್ಟಿಸುವ ಸಾಧ್ಯತೆ ಇದೆ!