Bengaluru: ಆಪಲ್ ತನ್ನ ಕಾರ್ಯಕ್ರಮದಲ್ಲಿ ಐಫೋನ್ 17, (Apple iPhone 17) ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು 17 ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಬಾರಿ ಪ್ರೊ ಮಾದರಿಗಳು ಆಪಲ್ನ ಹೊಸ A19 ಪ್ರೊ ಚಿಪ್‌ನೊಂದಿಗೆ ಬಂದಿದ್ದು, ಎಲ್ಲಾ ಮಾದರಿಗಳೂ ಆಪಲ್ ಇಂಟೆಲಿಜೆನ್ಸ್ AI ವೈಶಿಷ್ಟ್ಯವನ್ನು ಬೆಂಬಲಿಸುತ್ತವೆ. 128GB ಮಾದರಿಯನ್ನು ಕೈಬಿಟ್ಟು 256GB ಸ್ಟೋರೇಜ್‌ನಿಂದ ಪ್ರಾರಂಭವಾಗಿದೆ.
ಐಫೋನ್ 17 ವೈಶಿಷ್ಟ್ಯಗಳು
ಐಫೋನ್ 17 iOS 26 ಆಪರೇಟಿಂಗ್ ಸಿಸ್ಟಂನೊಂದಿಗೆ ಬರುತ್ತದೆ. ಅಮೆರಿಕದಲ್ಲಿ ಇದು ಇ-ಸಿಮ್ ಮಾದರಿಯಲ್ಲೇ ಲಭ್ಯವಿದೆ, ಆದರೆ ಇತರೆ ದೇಶಗಳಲ್ಲಿ ನ್ಯಾನೋ + ಇಸಿಮ್ ರೂಪದಲ್ಲಿ ಸಿಗುತ್ತದೆ. 6.3 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. 3,000 ನಿಟ್ಸ್ ಗರಿಷ್ಠ ಹೊಳಪನ್ನು ಇದು ನೀಡುತ್ತದೆ.
ಹೊಸ ಸೆರಾಮಿಕ್ ಶೀಲ್ಡ್ 2 ರಕ್ಷಣೆ, ಆಲ್ವೇಸ್ ಆನ್ ಡಿಸ್ಪ್ಲೇ ಹಾಗೂ IP68 ರೇಟಿಂಗ್ ಇದರ ಭಾಗವಾಗಿದೆ. ಕ್ಯಾಮೆರಾದಲ್ಲಿ 48MP ಮುಖ್ಯ ಲೆನ್ಸ್ ಮತ್ತು 48MP ಅಲ್ಟ್ರಾ ವೈಡ್ ಲೆನ್ಸ್ ದೊರೆಯುತ್ತದೆ. ಮುಂಭಾಗದಲ್ಲಿ ಸೆಂಟರ್ ಸ್ಟೇಜ್ ಕ್ಯಾಮೆರಾವಿದೆ.
A19 ಚಿಪ್ಸೆಟ್‌ನಿಂದ 40% ವೇಗ ಹೆಚ್ಚಿದೆ. ಬ್ಯಾಟರಿ ಬಾಳಿಕೆ ಐಫೋನ್ 16 ಗಿಂತ 8 ಗಂಟೆಗಳು ಹೆಚ್ಚು. ಕೇವಲ 20 ನಿಮಿಷಗಳಲ್ಲಿ 50% ಚಾರ್ಜ್ ಮಾಡಬಹುದಾಗಿದೆ.
ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್ ವೈಶಿಷ್ಟ್ಯಗಳು
ಪ್ರೊ ಮಾದರಿಗಳು ಈ ಬಾರಿ ಅಲ್ಯೂಮಿನಿಯಂ ಬಾಡಿಯಲ್ಲಿ ಬಂದಿವೆ. ವಿಶೇಷವೆಂದರೆ ಐಫೋನ್ ಏರ್ ಮಾದರಿಯು ಟೈಟಾನಿಯಂ ಬಾಡಿಯಲ್ಲಿ ಬಂದಿದೆ. ಮೊದಲ ಬಾರಿಗೆ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆ ನೀಡಲಾಗಿದೆ.
ಐಫೋನ್ 17 ಪ್ರೊ 6.3 ಇಂಚು ಮತ್ತು ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್ಪ್ಲೇ ಹೊಂದಿವೆ. ಸೆರಾಮಿಕ್ ಶೀಲ್ಡ್ 2 ರಕ್ಷಣೆಯಿಂದ ಗೀರುಗಳಿಗೆ ಮೂರು ಪಟ್ಟು ಹೆಚ್ಚು ರಕ್ಷಣೆ ಸಿಗುತ್ತದೆ.
ಹೊಸ A19 ಪ್ರೊ ಚಿಪ್ಸೆಟ್ 40% ಹೆಚ್ಚು ಕಾರ್ಯಕ್ಷಮತೆಯನ್ನು ನೀಡುತ್ತದೆ. ಕ್ಯಾಮೆರಾದಲ್ಲಿ 48MP ಮುಖ್ಯ, 48MP ಅಲ್ಟ್ರಾ ವೈಡ್ ಮತ್ತು 48MP ಟೆಲಿಫೋಟೋ ಲೆನ್ಸ್ ದೊರೆಯುತ್ತದೆ. ಮುಂಭಾಗದಲ್ಲಿ 18MP ಕ್ಯಾಮೆರಾ ಲಭ್ಯ.
ಪ್ರೊ ಮಾದರಿಗಳಲ್ಲಿ ದೊಡ್ಡ ಬ್ಯಾಟರಿ ನೀಡಲಾಗಿದೆ. ಐಫೋನ್ 17 ಪ್ರೊ ಮ್ಯಾಕ್ಸ್ ಇದುವರೆಗೆ ಬಂದ ಎಲ್ಲಾ ಐಫೋನ್‌ಗಳಲ್ಲಿ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಚಾರ್ಜಿಂಗ್ ವೇಗವೂ ಹೆಚ್ಚಿದೆ, 20 ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ.
ಭಾರತದಲ್ಲಿ ಮಾರಾಟ: ಸೆಪ್ಟೆಂಬರ್ 12 ರಿಂದ ಸಂಜೆ 5:30 ಕ್ಕೆ ಪೂರ್ವ-ಆರ್ಡರ್ ಆರಂಭವಾಗಲಿದೆ. ಮಾರಾಟವು ಸೆಪ್ಟೆಂಬರ್ 19 ರಿಂದ ಆಪಲ್ ನ online ಅಂಗಡಿ, offline ಅಂಗಡಿ ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್ಫಾರ್ಮ್‌ಗಳಲ್ಲಿ ನಡೆಯಲಿದೆ.