ಆ್ಯಪಲ್ ತನ್ನ ‘Awe ಡ್ರಾಪಿಂಗ್’ ಕಾರ್ಯಕ್ರಮದಲ್ಲಿ ವಾಚ್ ಸೀರಿಸ್ 11, ವಾಚ್ ಅಲ್ಟ್ರಾ 3 ಮತ್ತು ವಾಚ್ SE (3ನೇ ಜನರೇಷನ್) ಅನ್ನು ಬಿಡುಗಡೆ ಮಾಡಿದೆ. ಇದು ಹಿಂದಿನ ವಾಚ್ ಸೀರಿಸ್ 10 ಮತ್ತು ವಾಚ್ SE 2 ಕ್ಕಿಂತ update ಮಾಡಲ್ಪಟ್ಟ ಮಾದರಿಯಾಗಿದೆ.
ಬೆಲೆ ಮತ್ತು ರೂಪಾಂತರಗಳು: ಅಮೆರಿಕದಲ್ಲಿ ವಾಚ್ ಸೀರಿಸ್ 11 ಬೆಲೆ $399 (ಭಾರತದಲ್ಲಿ ₹46,900). ಇದು 42mm ಮತ್ತು 46mm ಗಾತ್ರದಲ್ಲಿ ಲಭ್ಯ. ಜೆಟ್ ಬ್ಲಾಕ್, ರೋಸ್ ಗೋಲ್ಡ್, ಸಿಲ್ವರ್ ಮತ್ತು ಸ್ಪೇಸ್ ಗ್ರೇ ಬಣ್ಣಗಳಲ್ಲಿ ಬಿಡುಗಡೆಯಾಗಿದೆ.
ಟೈಟಾನಿಯಂ ಕೇಸ್ ಆಯ್ಕೆಯಲ್ಲಿ ನ್ಯಾಚುರಲ್, ಗೋಲ್ಡ್ ಮತ್ತು ಸ್ಲೇಟ್ ಬಣ್ಣ ಲಭ್ಯ. ಹರ್ಮೆಸ್ ರೂಪಾಂತರವನ್ನು ಕೇವಲ ಸಿಲ್ವರ್ ಟೈಟಾನಿಯಂ ಕೇಸ್‌ನಲ್ಲೇ ಖರೀದಿಸಬಹುದು.
ಆ್ಯಪಲ್ ವಾಚ್ ಅಲ್ಟ್ರಾ 3 ಬೆಲೆ: ಅಮೆರಿಕದಲ್ಲಿ ಇದರ ಬೆಲೆ $799 (ಭಾರತದಲ್ಲಿ ₹89,900). ನ್ಯಾಚುರಲ್ ಮತ್ತು ಬ್ಲ್ಯಾಕ್ ಟೈಟಾನಿಯಂ ಕೇಸ್ ರೂಪಾಂತರಗಳಲ್ಲಿ ಲಭ್ಯ. ಹೊಸ ಬಣ್ಣದ ಓಷನ್ ಬ್ಯಾಂಡ್, ಆಲ್ಪೈನ್ ಲೂಪ್, ಹರ್ಮೆಸ್ ಟ್ರೈಲ್ ಲೂಪ್ ಮತ್ತು ಎನ್ ಮೆರ್ ಬ್ಯಾಂಡ್ ಕೂಡ ಬಿಡುಗಡೆ ಮಾಡಲಾಗಿದೆ.
ಆ್ಯಪಲ್ ವಾಚ್ SE 3 ಬೆಲೆ: ವಾಚ್ SE 3 ಅಮೆರಿಕದಲ್ಲಿ $299, ಭಾರತದಲ್ಲಿ ₹25,900ಗೆ ಲಭ್ಯ. ಇದು ವಾಚ್ SE 2 ನಂತರ ಮೂರು ವರ್ಷಗಳ ಬಳಿಕ ಬಂದ update ಮಾದರಿಯಾಗಿದೆ.
ವಾಚ್ ಸೀರಿಸ್ 11 ವೈಶಿಷ್ಟ್ಯಗಳು: ಸೀರಿಸ್ 11 5G ಎನೆಬಲ್ ಆಗಿದ್ದು, iOS 26 ಮೇಲೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಬಲವಾದ, ಸ್ಕ್ರಾಚ್ ನಿರೋಧಕ ಅಯಾನ್-ಎಕ್ಸ್ಚೇಂಜ್ಡ್ ಗ್ಲಾಸ್ ಬಳಸಲಾಗಿದೆ. ಸಂಪೂರ್ಣ ಮರುಬಳಕೆಯ ಟೈಟಾನಿಯಂ ಮತ್ತು ಅಲ್ಯೂಮಿನಿಯಂ ಕೇಸ್ ಹೊಂದಿದೆ.
ಫಾಸ್ಟ್ ಚಾರ್ಜಿಂಗ್, 24 ಗಂಟೆಗಳ ಬ್ಯಾಟರಿ ಲೈಫ್, ಲೈವ್ ಟ್ರಾನ್ಸ್ಲೇಟ್ ವೈಶಿಷ್ಟ್ಯ, ಹೈಪರ್ಟೆನ್ಷನ್ ಅಲರ್ಟ್ ಮತ್ತು ಸ್ಲೀಪ್ ಸ್ಕೋರ್ ಮಾದರಿಗಳನ್ನು ಸೇರಿಸಲಾಗಿದೆ.
ವಾಚ್ ಅಲ್ಟ್ರಾ 3 ವೈಶಿಷ್ಟ್ಯಗಳು: ಇದು 5G ಬೆಂಬಲಿತವಾಗಿದ್ದು, ಅತಿದೊಡ್ಡ ಡಿಸ್ಪ್ಲೇ ಹೊಂದಿದೆ. LTPO3 ವೈಡ್ ಆಂಗಲ್ OLED ಸ್ಕ್ರೀನ್ ಬಳಕೆ ಮಾಡಲಾಗಿದೆ. ಬೆಜಲ್ ಶೇ.24ರಷ್ಟು ತೆಳುವಾಗಿದ್ದು, ಹೆಚ್ಚು ಸ್ಕ್ರೀನ್ ಏರಿಯಾ ನೀಡುತ್ತದೆ.
ಸಿಂಗಲ್ ಚಾರ್ಜ್‌ನಲ್ಲಿ 42 ಗಂಟೆಗಳ ಕಾಲ, ಕಡಿಮೆ ಪವರ್ ಮೋಡ್‌ನಲ್ಲಿ 72 ಗಂಟೆಗಳ ಕಾಲ ಬಳಸಬಹುದು. 15 ನಿಮಿಷ ಚಾರ್ಜ್ ಮಾಡಿದರೆ 12 ಗಂಟೆಗಳ ಬಳಕೆ ಸಾಧ್ಯ.
ಟು-ಲೆ ಸ್ಯಾಟಲೈಟ್ ಕಮ್ಯುನಿಕೇಷನ್ ಸೌಲಭ್ಯದಿಂದ ಸೆಲ್ಯುಲಾರ್ ಅಥವಾ ವೈ-ಫೈ ಇಲ್ಲದಿದ್ದರೂ ತುರ್ತು SOS, ಮೆಸೇಜ್ ಮತ್ತು ಲೊಕೇಶನ್ ಹಂಚಿಕೊಳ್ಳಬಹುದು.
ವಾಚ್ SE 3 ವೈಶಿಷ್ಟ್ಯಗಳು: SE 3 ಮಾದರಿಯಲ್ಲಿ ಆಲ್ವೇಸ್ ಆನ್ ಡಿಸ್ಪ್ಲೇ, ಸ್ಲೀಪ್ ಸ್ಕೋರ್, ಹೈಪರ್ಟೆನ್ಷನ್ ಡಿಟೆಕ್ಷನ್ ಸೇರಿದಂತೆ ಅನೇಕ ಹೊಸ ವೈಶಿಷ್ಟ್ಯಗಳಿವೆ. ಇದರೊಂದಿಗೆ S10 ಚಿಪ್ಸೆಟ್, ಕ್ಲೈಮೆಟ್ ಸೆನ್ಸಿಂಗ್, ಸ್ಲೀಪ್ ಅಪ್ನಿಯಾ ನೊಟಿಫಿಕೇಶನ್, ವ್ರಿಸ್ಟ್ ಟೆಂಪರೇಚರ್ ಸೆನ್ಸಾರ್ ದೊರೆಯುತ್ತವೆ. ಡಬಲ್ ಟ್ಯಾಪ್ ಮತ್ತು ವ್ರಿಸ್ಟ್ ಫ್ಲಿಕ್ ಜ್ಞಾಪನೆಗಳು, ಆನ್-ಡಿವೈಸ್ ಸಿರಿ ಮತ್ತು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ.
ಹೃದಯ ಆರೋಗ್ಯ ಅಧಿಸೂಚನೆ, ಸೈಕಲ್ ಟ್ರ್ಯಾಕಿಂಗ್, ಕಾರ್ಡಿಯೋ ಫಿಟ್ನೆಸ್, ಫಾಲ್ ಡಿಟೆಕ್ಷನ್, ಕ್ರ್ಯಾಶ್ ಡಿಟೆಕ್ಷನ್ ಮತ್ತು ತುರ್ತು SOS ವೈಶಿಷ್ಟ್ಯಗಳು ಕೂಡ ಲಭ್ಯವಿವೆ.