ಕೆಂದ್ರ ಸರ್ಕಾರ ಇತ್ತೀಚೆಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, 7 ಮಂದಿಗೆ ಪದ್ಮವಿಭೂಷಣ, 19 ಮಂದಿಗೆ ಪದ್ಮಭೂಷಣ ಮತ್ತು 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ (Padma Shri award) ನೀಡಲಾಗಿದೆ. ಈ ಪೈಕಿ ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ ಕೂಡಾ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ.
ಆದರೆ ಈ ನಿರ್ಧಾರವು ಮತ್ತೊಬ್ಬ ಖ್ಯಾತ ಗಾಯಕ ಸೋನು ನಿಗಮ್‌ಗೆ ಸರಿಹೋದಂತೆ ತೋರುತ್ತಿಲ್ಲ. ಇದಕ್ಕೆ ಸಾಕ್ಷಿ ಅವರೇ ಹಂಚಿಕೊಂಡಿರುವ ಒಂದು ವಿಡಿಯೋ.
ಅರಿಜಿತ್‌ಗೆ ಪದ್ಮಶ್ರೀ ಘೋಷಣೆಗೊಂಡ ಬೆನ್ನಲ್ಲೇ, ಸೋನು ನಿಗಮ್ ಭಾರತದ ಕೆಲ ಪ್ರಮುಖ ಗಾಯಕರಿಗೆ ಈ ಗೌರವ ಸಿಕ್ಕಿಲ್ಲ ಎಂಬುದರ ಬಗ್ಗೆ ತಮ್ಮ ಅನಿಸಿಕೊಟ್ಟಿದ್ದಾರೆ. ಅವರು ವಿಡಿಯೋದಲ್ಲಿ ಮೊಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಸೇರಿ ಹಲವರ ಹೆಸರು ಉಲ್ಲೇಖಿಸಿದ್ದಾರೆ.
“ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್ ಅವರಂತಹ ಪ್ರತಿಭಾವಂತ ಗಾಯಕಿಯರು ವರ್ಷಗಳಿಂದ ಗಾಯನ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದರೂ ಅವರಿಗೆ ಪದ್ಮ ಪ್ರಶಸ್ತಿ ಸಿಗಲೇ ಇಲ್ಲ” ಎಂದು ಸೋನು ಅಸಮಾಧಾನ ವ್ಯಕ್ತಪಡಿಸಿದ್ದಾರೆ.