Friday, March 29, 2024
HomeIndiaAssamAssam ಪ್ರವಾಹ : ಸಾವಿನ ಸಂಖ್ಯೆ 134 ಕ್ಕೆ ಏರಿಕೆ

Assam ಪ್ರವಾಹ : ಸಾವಿನ ಸಂಖ್ಯೆ 134 ಕ್ಕೆ ಏರಿಕೆ

Assam : ಅಸ್ಸಾಂ ರಾಜ್ಯದಲ್ಲಿ ಪ್ರವಾಹ (Floods) ಪರಿಸ್ಥಿತಿ ಏಳು ದಿನಗಳ ನಂತರ ಕೊಂಚ ಸುಧಾರಣೆಗೊಂಡಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಹದ ನೀರಿನ ಮಟ್ಟ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2 ಮಕ್ಕಳು ಸೇರಿದಂತೆ 8 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದು, ಈ ಮೂಲಕ ಸಾವಿನ (Death) ಸಂಖ್ಯೆ 134 ಕ್ಕೆ ಏರಿದೆ.

ಕ್ಯಾಚಾರ್​ – 5, ಕಾಮ್ರೂಪ್, ಮೊರಿಗಾಂವ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ತಲಾ 1 ಸಾವು ವರದಿಯಾಗಿದೆ. ಒಟ್ಟು 2,254 ಹಳ್ಳಿಗಳಲ್ಲಿ 21.52 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಸ್ಸಾಂ ರಾಜ್ಯಾದ್ಯಂತ 1,91,194 ಪ್ರವಾಹ ಪೀಡಿತ ಸಂತ್ರಸ್ತರು 538 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಪ್ರವಾಹದಿಂದ 74,655 ಹೆಕ್ಟೇರ್ ಬೆಳೆ ನಾಶವಾಗಿದ್ದು, ನೂರಾರು ಮನೆಗಳು, ಹಲವಾರು ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ನೀರಾವರಿ ಕಾಲುವೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ.

- Advertisement -

Image : ANI

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page