Bengaluru: ವಿಧಾನಸಭೆಯಲ್ಲಿ (Assembly Session) ಅಂಬೇಡ್ಕರ್ ವಿಷಯದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ (BJP-Congress) ಸದಸ್ಯರ ನಡುವೆ ಕಠಿಣ ವಾಕ್ಸಮರ ನಡೆಯಿತು. “ಕಾಂಗ್ರೆಸ್ ಅಂಬೇಡ್ಕರ್ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆ, ಅವರ ತತ್ವಗಳಿಗೆ ಅವಮಾನ ಮಾಡುತ್ತಿದೆ” ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ “ಅಂಬೇಡ್ಕರ್ ಅವರಿಗೆ ನಿಜವಾದ ಅಪಮಾನ ಮಾಡಿರುವುದು ಬಿಜೆಪಿ” ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು.
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಂಬೇಡ್ಕರ್ ಬರೆದ ಪತ್ರವೊಂದನ್ನು ತೋರಿಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದರಿಂದ ಬಿಜೆಪಿ ಸದಸ್ಯರು ಇನ್ನಷ್ಟು ಆಕ್ರೋಶಗೊಂಡರು ಮತ್ತು ಸದನದಲ್ಲಿ ಗದ್ದಲ ಮುಂದುವರಿಯಿತು. ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ, ಸ್ಪೀಕರ್ ಯುಟಿ ಖಾದರ್ ಅವರು ಮಧ್ಯಪ್ರವೇಶಿಸಿ, “ಗೆಟ್ ಔಟ್!” ಎಂದು ಬಿಜೆಪಿ ಸದಸ್ಯರಿಗೆ ಗುಡುಗಿ, ಗದ್ದಲವನ್ನು ನಿಯಂತ್ರಿಸಲು ಪ್ರಯತ್ನಿಸಿದರು.