
Mysuru: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ (Udayagiri Police Station) ಸಂಬಂಧ ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಹೈಕೋರ್ಟ್ ಷರತ್ತುಗಳು
- 1 ಲಕ್ಷ ರೂಪಾಯಿ ಬಾಂಡ್ ನೀಡಬೇಕು.
- ಪ್ರತಿಭಟನೆ ಶಾಂತಿಯುತವಾಗಿರಬೇಕು ಮತ್ತು ಪೂರ್ಣ ಚಿತ್ರೀಕರಣ ಮಾಡಬೇಕು.
- ಪ್ರಚೋದನಕಾರಿ ಹೇಳಿಕೆ ನೀಡಬಾರದು.
- ಅಹಿತಕರ ಘಟನೆ ನಡೆದರೆ ಅರ್ಜಿದಾರರು ಹೊಣೆ.
ಹೈಕೋರ್ಟ್ ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ, ಮೈಸೂರು ಪೊಲೀಸ್ ಆಯುಕ್ತರಿಗೆ ಪ್ರತಿಭಟನೆಗೆ ಸಂಜೆ 3.30ರಿಂದ ಅನುಮತಿ ನೀಡುವಂತೆ ಸೂಚನೆ ನೀಡಿದೆ.
ಸರ್ಕಾರದ ವಾದ
- ಪ್ರತಿಭಟನೆಗೆ ಅವಕಾಶ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಹುದು.
- 8 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ, 9 ಮಂದಿ ಪೊಲೀಸರಿಗೆ ಗಾಯವಾಗಿದೆ.
- ಬೇರೆ ಸಂಘಟನೆಗಳಿಗೂ ಅನುಮತಿ ನಿರಾಕರಿಸಲಾಗಿದೆ.
- 300ಕ್ಕಿಂತ ಹೆಚ್ಚು ಜನರಿಗೆ ಅವಕಾಶ ನೀಡಬಾರದು.
ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿಯ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಪ್ರತಿಭಟನೆಗೆ ಅನುಮತಿ ನೀಡಲು ಮನವಿ ಮಾಡಿದರು. ನ್ಯಾಯಪೀಠ, ಅಹಿತಕರ ಘಟನೆ ನಡೆದರೆ ಯಾರು ಹೊಣೆ? ಎಂದು ಪ್ರಶ್ನಿಸಿ, ಬೇರೆ ಮೈದಾನದಲ್ಲಿ ನಡೆಸುವ ಪ್ರಸ್ತಾವನೆ ನೀಡಿತು. ಹೈಕೋರ್ಟ್ ಎರಡೂ ವಾದಗಳನ್ನು ಆಲಿಸಿ, ಸರ್ಕಾರದ ಪರ ವಕೀಲರ ಅಭಿಪ್ರಾಯ ಪಡೆದು, ಶರತ್ತುಬದ್ಧವಾಗಿ ಪ್ರತಿಭಟನೆಗೆ ಅನುಮತಿ ನೀಡಿತು