Dhaka, Bangladesh: ಭಾರತದ (India) ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ (Foreign Secretary Vikram Mishri) ಅವರು ಬಾಂಗ್ಲಾದೇಶದಲ್ಲಿ (Bangladesh) ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ಅವರೊಂದಿಗೆ ಸಭೆ ನಡೆಸಿ, ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ವಿಷಾದನೀಯವೆಂದು ಹೇಳಿದ್ದಾರೆ.
ಧನಾತ್ಮಕ, ರಚನಾತ್ಮಕ ಮತ್ತು ಪರಸ್ಪರ ಲಾಭದಾಯಕ ಪಾಲುದಾರಿಕೆಯನ್ನು ಬಾಂಗ್ಲಾದೇಶದೊಂದಿಗೆ ನಿರ್ಮಿಸಲು ಭಾರತ ಬದ್ಧವಾಗಿದೆ ಎಂದು ಮಿಶ್ರಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ತಿಳಿಸಿದ್ದಾರೆ.
ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದೇಶದೊಂದಿಗೆ ಭಾರತದ ಮೊದಲ ಉನ್ನತ ಮಟ್ಟದ ಸಭೆ ಇದು. ಇತ್ತೀಚಿನ ಹಿಂಸಾಚಾರ, ಧಾರ್ಮಿಕ ಸ್ಥಳಗಳ ಅಪವಿತ್ರತೆ, ಮತ್ತು ಹಿಂದೂ ಪುರೋಹಿತರ ಮೇಲಿನ ದಬ್ಬಾಳಿಕೆ ಘಟನೆಗಳನ್ನು ಚರ್ಚಿಸಲಾಗಿದೆ.
ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಬಾಂಗ್ಲಾದೇಶ ಪ್ರಭುತ್ವವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತ ಒತ್ತಾಯಿಸಿದೆ.