
ಚಾಂಪಿಯನ್ಸ್ ಟ್ರೋಫಿಯ (Champions Trophy) 10ನೇ ಪಂದ್ಯದಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ (Australia vs Afghanistan) ಮುಖಾಮುಖಿಯಾಗುತ್ತಿವೆ. ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಸೆಮಿಫೈನಲ್ ಮುನ್ನಡೆಯಲು ಎರಡೂ ತಂಡಗಳಿಗೆ ಗೆಲುವು ಅಗತ್ಯ.
ಇಂಗ್ಲೆಂಡ್ ವಿರುದ್ಧದ ಶಾಕಿಂಗ್ ಗೆಲುವಿನ ಬಳಿಕ, ಅಫ್ಘಾನ್ ಈಗ ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಆಘಾತ ನೀಡಲು ಸಜ್ಜಾಗಿದೆ. 2024 ಟಿ-20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಅಫ್ಘಾನ್, ಮತ್ತೊಮ್ಮೆ ಐಸಿಸಿ ಟೂರ್ನಿಯ ಸೆಮಿಫೈನಲ್ ತಲುಪುವ ದಾರಿಯಲ್ಲಿದೆ.
- ಆಸ್ಟ್ರೇಲಿಯಾ ಗೆದ್ದರೆ: ನೇರವಾಗಿ ಸೆಮಿಫೈನಲ್ ಗೆ ಪ್ರವೇಶ.
- ಅಫ್ಘಾನ್ ಗೆದ್ದರೆ: ನಾಲ್ಕು ಅಂಕಗಳೊಂದಿಗೆ ರನ್ ರೇಟ್ ಹೆಚ್ಚಿಸಿಕೊಂಡು ಮುನ್ನಡೆಯುವ ಸಾಧ್ಯತೆ.
- ಆಸ್ಟ್ರೇಲಿಯಾ ಸೋತರೆ: ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ.
ಇಂದಿನವರೆಗೆ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಾಲ್ಕು ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಎಲ್ಲ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಜಯ ಗಳಿಸಿದೆ.
ಅಫ್ಘಾನಿಸ್ತಾನ: ರಹಮಾನಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಜದ್ರಾನ್, ಸೆಡಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜೈ, ಮೊಹಮ್ಮದ್ ನಬಿ, ಗುಲ್ಬಾದಿನ್ ನಾಯಬ್, ರಶೀದ್ ಖಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕ್.
ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿ.ಕೀ), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್ವೆಲ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ಸ್ಪೆನ್ಸರ್ ಜಾನ್ಸನ್.
ಆರಂಭ: ಮಧ್ಯಾಹ್ನ 2.30, ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ & ಜಿಯೋ ಹಾಟ್ಸ್ಟಾರ್