ಭಾರತದ ವಿರುದ್ಧದ ಏಕದಿನ ಮತ್ತು ಟಿ20 ಕ್ರಿಕೆಟ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು (Australia Squad) ಪ್ರಕಟಿಸಲಾಗಿದೆ. ಎರಡೂ ತಂಡಗಳಿಗೆ ಮಿಚೆಲ್ ಮಾರ್ಷ್ ನಾಯಕತ್ವ ವಹಿಸಿದ್ದಾರೆ. ಈ ತಿಂಗಳಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ಪ್ರವಾಸಕ್ಕೆ ಹೋಗಲಿದ್ದು, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ. ಏಕದಿನ ಸರಣಿ ಅಕ್ಟೋಬರ್ 19ರಿಂದ ಮತ್ತು ಟಿ20 ಸರಣಿ ಅಕ್ಟೋಬರ್ 29ರಿಂದ ಆರಂಭವಾಗಲಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಇಂದು ಏಕದಿನ ಮತ್ತು ಟಿ20 ತಂಡಗಳನ್ನು ಘೋಷಿಸಿದೆ. ಸ್ಟಾರ್ ಆಟಗಾರರು ಪ್ಯಾಟ್ ಕಮ್ಮಿನ್ಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಗಾಯದಿಂದ ಹೊರಗಾಗಿದ್ದಾರೆ. ಏಕದಿನ ತಂಡದಲ್ಲಿ ಮಾರ್ನಸ್ ಲ್ಯಾಬುಶೇನ್ ಹೊರಗಾಗಿದ್ದು, ಮ್ಯಾಥ್ಯೂ ರೆನ್ಶಾ ಸೇರಿಕೊಂಡಿದ್ದಾರೆ. ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಸ್ಟಾರ್ಕ್ ತಂಡಕ್ಕೆ ಮರಳಿದ್ದಾರೆ. ಮಿಚೆಲ್ ಓವನ್ ಮತ್ತು ಮ್ಯಾಥ್ಯೂ ಶಾರ್ಟ್ ಕೂಡ ಆಯ್ಕೆಯಾಗಿದ್ದಾರೆ.
ಟಿ20 ತಂಡದಲ್ಲಿ ಜೋಶ್ ಇಂಗ್ಲಿಸ್ ಮತ್ತು ನಾಥನ್ ಎಲ್ಲಿಸ್ ಗಾಯದಿಂದ ಚೇತರಿಸಿಕೊಂಡು ಮರಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿದ್ದ ಟ್ರಾವಿಸ್ ಹೆಡ್ ಮತ್ತು ಜೋಶ್ ಫಿಲಿಪ್ ತಂಡದಿಂದ ಹೊರಗಾಗಿದ್ದಾರೆ. ಟಿಮ್ ಡೇವಿಡ್, ಮಿಚೆಲ್ ಓವನ್, ಸೀನ್ ಅಬಾಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ ತಂಡಕ್ಕೆ ಸೇರಿದ್ದಾರೆ.
ಏಕದಿನ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕಾನೊಲಿ, ಬೆನ್ ಡಾರ್ಶಿಯಸ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ.
ಟಿ20 ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ಡಾರ್ಶಿಯಸ್, ನಾಥನ್ ಎಲ್ಲಿಸ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.
ಭಾರತ ತಂಡದ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ಸರಣಿಗೆ ತಂಡವನ್ನು ಪ್ರಕಟಿಸಿದೆ. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಏಕದಿನ ತಂಡದಲ್ಲಿ ಹೊಸ ನಾಯಕನಾಗಿ ಶುಭ್ಮನ್ ಗಿಲ್ ನೇಮಿತರಾಗಿದ್ದಾರೆ ಮತ್ತು ಶ್ರೇಯಸ್ ಅಯ್ಯರ್ ಉಪನಾಯಕ. ಟಿ20 ತಂಡದಲ್ಲಿ ಸೂರ್ಯಕುಮಾರ್ ಯಾದವ್ ನಾಯಕ, ಶುಭ್ಮನ್ ಗಿಲ್ ಉಪನಾಯಕ.
ಭಾರತ ಏಕದಿನ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೇಲ್, ಯಶಸ್ವಿ ಜೈಸ್ವಾಲ್.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ಅರ್ಶಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.
ಭಾರತ–ಆಸ್ಟ್ರೇಲಿಯಾ ಏಕದಿನ ಸರಣಿ
- ಅಕ್ಟೋಬರ್ 19 – ಮೊದಲ ಪಂದ್ಯ, ಪಾರ್ಥ್
- ಅಕ್ಟೋಬರ್ 23 – ಎರಡನೇ ಪಂದ್ಯ, ಅಡಿಲೇಡ್
- ಅಕ್ಟೋಬರ್ 25 – ಮೂರನೇ ಪಂದ್ಯ, ಸಿಡ್ನಿ
ಭಾರತ–ಆಸ್ಟ್ರೇಲಿಯಾ ಟಿ20 ಸರಣಿ
- ಅಕ್ಟೋಬರ್ 29 – ಮೊದಲ ಪಂದ್ಯ, ಕ್ಯಾನ್ಬೆರಾ
- ಅಕ್ಟೋಬರ್ 31 – ಎರಡನೇ ಪಂದ್ಯ, ಮೆಲ್ಬೋರ್ನ್
- ನವೆಂಬರ್ 2 – ಮೂರನೇ ಪಂದ್ಯ, ಹೋಬಾರ್ಟ್
- ನವೆಂಬರ್ 6 – ನಾಲ್ಕನೇ ಪಂದ್ಯ, ಗೋಲ್ಡ್ ಕೋಸ್ಟ್
- ನವೆಂಬರ್ 8 – ಐದನೇ ಪಂದ್ಯ, ಬ್ರಿಸ್ಬೇನ್