back to top
27.9 C
Bengaluru
Saturday, August 30, 2025
HomeNewsAxiom-4 mission ಮತ್ತೆ ವಿಳಂಬ: Shubhash Shukla ಭಾಗಿಯಾಗಿರುವ ಮಿಷನ್ ಈಗಾಗಲೇ 7ನೇ ಬಾರಿ ಮುಂದೂಡಿಕೆ

Axiom-4 mission ಮತ್ತೆ ವಿಳಂಬ: Shubhash Shukla ಭಾಗಿಯಾಗಿರುವ ಮಿಷನ್ ಈಗಾಗಲೇ 7ನೇ ಬಾರಿ ಮುಂದೂಡಿಕೆ

- Advertisement -
- Advertisement -

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhash Shukla) ಸಹಿತ ನಾಲ್ವರು ಅಂತರಿಕ್ಷಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳೆಯಲಿರುವ ಆಕ್ಸಿಯಮ್-4 ಮಿಷನ್ (Axiom-4 mission) ಉಡಾವಣೆಯನ್ನು ಮತ್ತೆ ಮುಂದೂಡಲಾಗಿದೆ. ನಾಸಾ ಮಾಹಿತಿ ಪ್ರಕಾರ, ಮುಂದಿನ ದಿನಗಳಲ್ಲಿ ಹೊಸ ದಿನಾಂಕವನ್ನು ಘೋಷಿಸಲಾಗುವುದು.

ಜೂನ್ 22ರಂದು ನಿಗದಿಯಾಗಿದ್ದ ಉಡಾವಣೆ ಯನ್ನು ನಾಸಾ ಹಿಂದಕ್ಕೆ ತೆಗೆದುಕೊಂಡಿದ್ದು, ಬಾಹ್ಯಾಕಾಶ ನಿಲ್ದಾಣದ ಪ್ರಮುಖ ದುರಸ್ತಿ ಕಾರ್ಯಗಳ ನಂತರ ಇನ್ನಷ್ಟು ತಾಂತ್ರಿಕ ಮೌಲ್ಯಮಾಪನ ಬೇಕು ಎಂಬ ಕಾರಣದಿಂದಾಗಿ ವಿಳಂಬವಾಗಿದೆ.

ಈ ಮಿಷನ್ ಈಗಾಗಲೇ ಏಳು ಬಾರಿ ಮುಂದೂಡಿಕೆಯಾದಿದ್ದು, ಪ್ರಥಮವಾಗಿ ಮೇ 29ಕ್ಕೆ ಉಡಾವಣೆ ನಿರ್ಧರಿಸಲಾಗಿತ್ತು. ನಂತರದ ದಿನಾಂಕಗಳಾದ ಜೂನ್ 8, 10, 11, 19 ಮತ್ತು ಇತ್ತೀಚಿನ 22ರ ಉಡಾವಣೆಗಳನ್ನೂ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲಾಗುತ್ತಿದೆ.

ಆಕ್ಸಿಯಮ್-4 ಯಾನ: ಐತಿಹಾಸಿಕ ಮಹತ್ವ: ಈ ಮಿಷನ್ ಭಾರತ, ಪೋಲೆಂಡ್ ಹಾಗೂ ಹಂಗೇರಿ ರಾಷ್ಟ್ರಗಳ ಪಾಲಿಗೆ ಮಹತ್ವದ ಒಂದು ಸಂಧಿ. ಈ ಮೂರು ರಾಷ್ಟ್ರಗಳು ಮೊದಲ ಬಾರಿಗೆ ಜಂಟಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುತ್ತಿವೆ. ಫ್ಲೋರಿಡಾದ ನಾಸಾ ಕೇಂದ್ರದಿಂದ ಫಾಲ್ಕನ್-9 ರಾಕೆಟ್‌ನಲ್ಲಿ ಸ್ಪೇಸ್ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಮಿಷನ್ ಉಡಾವಣೆಯಾಗಲಿದೆ.

ಈ ಖಾಸಗಿ ಮಿಷನ್‍ಗೆ ನಾಸಾದ ಹಿರಿಯ ಗಗನಯಾತ್ರಿ ಪೆಗ್ಗಿ ವಿಟ್ಸನ್ ನಾಯಕತ್ವ ವಹಿಸಲಿದ್ದಾರೆ. ಇತರ ಸದಸ್ಯರಾದ ಪೋಲೆಂಡ್ನ ಸ್ಲಾವೊಜ್ ಉಜ್ನಾನ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ತಮ್ಮ ರಾಷ್ಟ್ರಗಳ ಮೊದಲ ಅಂತರಿಕ್ಷಯಾತ್ರಿಗಳು.

ಮಿಷನ್ ಸಮಯದಲ್ಲಿ ಶುಭಾಂಶು ಶುಕ್ಲಾ ಭಾರತದಲ್ಲಿ ಅಭಿವೃದ್ಧಿಪಡಿಸಿದ ಏಳು ವಿಜ್ಞಾನ ಪ್ರಯೋಗಗಳನ್ನು ನಡೆಸಲಿದ್ದಾರೆ. ಇದರ ಜೊತೆಗೆ ನಾಸಾ ಜೊತೆಗೂ ಸಹ ಸಂಶೋಧನೆ ನಡೆಸಲಿದ್ದಾರೆ.

ಶುಭಾಂಶು ಶುಕ್ಲಾ ಅವರಿಗೆ 2000 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವವಿದ್ದು, ವಿವಿಧ ಯುದ್ಧ ವಿಮಾನಗಳನ್ನು ನಿರ್ವಹಿಸಿರುವ ಪೈಲಟ್. ಇತ್ತೀಚಿಗೆ ಅವರಿಗೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ದೊರೆತಿದೆ. ಇವರು ಭಾರತದಿಂದ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರು.

ಇತರರು

  • ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್
  • ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್
  • ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್

ಇವರ ಜೊತೆಗೆ ಭಾರತೀಯ ಬಾಹ್ಯಾಕಾಶದ ಭವಿಷ್ಯ ನಿರ್ಮಾಣವಾಗುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page