ಕಳೆದ ಎರಡು ವರ್ಷಗಳಿಂದ ಬಾಬರ್ ಆಝಂ (Babar Azam) ಕಳಪೆ ಫಾರ್ಮ ನಲ್ಲಿದ್ದರು. ಆದರೆ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ತಮ್ಮ ಫಾರ್ಮ್‌ಗೆ ಮರಳಿದ್ದಾರೆ. ಈ ಆಟದೊಂದಿಗೆ ಬಾಬರ್ ತನ್ನ ಬ್ಯಾಟ್ ಮೂಲಕ ಭಾರಿ ಆದಾಯವನ್ನೂ ಗಳಿಸುತ್ತಿದ್ದಾರೆ.
ಬಾಬರ್, ಇಂಗ್ಲೆಂಡ್ ಮೂಲದ ಗ್ರೇ ನಿಕೋಲ್ಸ್ ಕಂಪೆನಿಯೊಂದಿಗೆ 5 ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಒಪ್ಪಂದವನ್ನು ಮುಗಿಸಿ, ಪಾಕಿಸ್ತಾನದ ಸಿಎ ಸ್ಪೋರ್ಟ್ಸ್ ಕಂಪೆನಿಯೊಂದಿಗೆ 7 ಕೋಟಿ ರೂ.ಗಳ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಇದರೊಂದಿಗೆ ಶತಕ ಮತ್ತು ಅರ್ಧಶತಕ ಗಳಿಗಾಗಿಯೂ ಬೋನಸ್ ಮೊತ್ತ ಪಡೆಯಲಿದ್ದಾರೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಬರ್ ಹೊಸ ಸಿಎ ಬ್ಯಾಟ್ ಬಳಸಿ ಆಡಲಿದ್ದಾರೆ. ಪಾಕಿಸ್ತಾನದಲ್ಲಿ ಈ ಟ್ರೋಫಿ ನಡೆಯುವ ಕಾರಣ, ಸಿಎ ಬ್ಯಾಟ್ ಇದೀಗ ಹೆಚ್ಚು ಜನಪ್ರಿಯವಾಗುವ ನಿರೀಕ್ಷೆ ಇದೆ.
ಬಾಬರ್ ಆಝಂ ಬ್ಯಾಟ್ ಬಳಸುತ್ತಿದ್ದಂತೆಯೇ ಸಿಎ ಕಂಪೆನಿಯ ಮಾರಾಟದಲ್ಲಿ ಏರಿಕೆಯಾಗಿದ್ದು, ಬಾಬರ್‌ನ ಯಶಸ್ಸು ಕಂಪೆನಿಗೆ ಹೆಚ್ಚಿನ ಕೀರ್ತಿ ತಂದಿದೆ.
2022ರಿಂದ ಟೆಸ್ಟ್ ಪಂದ್ಯಗಳಲ್ಲಿ ಹಾಫ್ ಸೆಂಚುರಿ ಸಿಡಿಸದಿದ್ದ ಬಾಬರ್, ಹೊಸ ಸಿಎ ಬ್ಯಾಟ್ ಬಳಸಿ 58 ಮತ್ತು 81 ರನ್ ಬಾರಿಸಿ ಮಿಂಚಿದ್ದಾರೆ. ಬ್ಯಾಟ್ ಬದಲಾದಂತೆ ಆಜ್ಮಾನಿಗೂ ಬದಲಾವಣೆ ಕಂಡುಬಂದಿದೆ.
ಈ ಹೊಸ ಡೀಲ್ ಬಾಬರ್ ಆಝಂಗೆ ಮಾತ್ರವಲ್ಲ, ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೂ ನೂತನ ನೆಚ್ಚಿನ ಬ್ರಾಂಡ್ ಆಗುವ ನಿರೀಕ್ಷೆಯಲ್ಲಿದೆ.