ಕರ್ನಾಟಕ ಸರ್ಕಾರವು (Karnataka governmen) ಅಬಕಾರಿ ಆದಾಯದ ಕೊರತೆಯನ್ನು ಪೂರೈಸಲು ಬಿಯರ್ ದರ ಏರಿಸಲು ನಿರ್ಧಾರ ಮಾಡಿದೆ. ಪ್ರೀಮಿಯಂ ಬಿಯರ್ ಬೆಲೆ 10 ರಿಂದ 50 ರೂ.ವರೆಗೆ ಹೆಚ್ಚಳವಾಗಲಿದ್ದು, ಹೊಸ ದರಗಳು ಜನವರಿ 20ರಿಂದ ಜಾರಿಗೆ ಬರಲಿವೆ.
ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಕಡಿಮೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತೀಯ ನಿರ್ಮಿತ ಮದ್ಯ (IML) ಮಾರಾಟವನ್ನು ಉತ್ತೇಜಿಸಲು, ಸರ್ಕಾರ IML ದರ ಶೇ 25 ರಷ್ಟು ಕಡಿಮೆ ಮಾಡುವ ಯೋಜನೆಯನ್ನು ಹೂಡಿಕೆ ಮಾಡಿದೆ.
2024ರ ಆಗಸ್ಟ್ ನಲ್ಲಿಯೇ ಬಿಯರ್ ದರ ಪರಿಷ್ಕರಣೆಗೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು, ಆದರೆ ತಾಂತ್ರಿಕ ಕಾರಣಗಳಿಂದ ಕಡತಕ್ಕೆ ಸಹಿ ಮೂಡಿರಲಿಲ್ಲ. ಇದೀಗ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಪರಿಷ್ಕೃತ ದರಗಳು ಜಾರಿಗೆ ಬರುತ್ತಿವೆ.
ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ಈ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ಬಿಯರ್ ದರ ಇತರೆ ರಾಜ್ಯಗಳಿಗಿಂತ ಹೆಚ್ಚು ಇರುವುದರಿಂದ ಮಾರಾಟದ ಮೇಲೆ ಪರಿಣಾಮ ಬೀಳಬಹುದು ಎಂದು ಹೇಳಿದೆ.
ಕೋವಿಡ್ ನಂತರದ ಅವಧಿಯಲ್ಲಿ ಗ್ರಾಹಕರ ನಡವಳಿಕೆಯ ಬದಲಾವಣೆ ಹಾಗೂ ಬೇಸಿಗೆ ದಿನಗಳಲ್ಲಿ ತಾಪಮಾನ ಏರಿಕೆಯಿಂದ ಬಿಯರ್ ಮಾರಾಟ ಕಳೆದ ಎರಡು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿದೆ.
ಬಿಯರ್ ಪ್ರಿಯರಿಗೆ ಹೊಸ ದರಗಳು ಹೊಸ ಚಿಂತೆ ತಂದರೂ, ಸರ್ಕಾರದ ಆದಾಯದ ನಿರೀಕ್ಷೆಗಳಿಗೆ ಇದು ನೆರವಾಗಬಹುದು.