ಪಶ್ಚಿಮ ಬಂಗಾಳದ (West Bengal) ಪ್ರೌಢಶಾಲೆಯ ಗೇಟ್ ಬಳಿ ಮಧ್ಯರಾತ್ರಿ ಬ್ಯಾಗ್ ಸ್ಫೋಟಗೊಂಡಿದ್ದು, ಸಚ್ಚಿದಾನಂದ ಮಿಶ್ರಾ (ಉತ್ತರ ಪ್ರದೇಶದ ನಿವಾಸಿ) ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ, ಮಿಶ್ರಾ ಚೀಲವನ್ನು ಹೊತ್ತುಕೊಂಡು ಹೋಗುತ್ತಿರುವಾಗ ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಚೀಲದಲ್ಲಿ ಸ್ಫೋಟಕ ವಸ್ತುಗಳಿರಬಹುದೆಂದು ಶಂಕಿಸಲಾಗಿದೆ.
ಗಾಯಗೊಂಡ ಅವರನ್ನು ಮೊದಲು ಬರಾಸತ್ ವೈದ್ಯಕೀಯ ಕಾಲೇಜಿಗೆ, ನಂತರ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಬೆಳಗ್ಗೆ ಸಾವನ್ನಪ್ಪಿದರು.
ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಿಶ್ರಾ ಜೊತೆ ಬೇರೆ ಯಾರಾದರೂ ಇದ್ದರಾ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸ್ಫೋಟದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ಫರೆನ್ಸಿಕ್ ತಜ್ಞರು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರೆದಿದ್ದಾರೆ. ಅಲ್ಲಿಂದ ಬ್ಯಾಗ್, ಮೊಬೈಲ್ ಚಾರ್ಜರ್ ಹಾಗೂ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೂಡ ಪ್ರಕರಣದಲ್ಲಿ ತಲೆ ಹಾಕಿದ್ದು, ಫರೆನ್ಸಿಕ್ ವರದಿ ಬರುವವರೆಗೂ ಸ್ಫೋಟದ ನಿಖರ ಕಾರಣ ತಿಳಿದುಬರಬೇಕಿದೆ.