Bagepalli : ಬಾಗೇಪಲ್ಲಿ ತಾಲ್ಲೂಕಿನ ದೇವರ ಗುಡಿಪಲ್ಲಿ (ಗಡಿದಂ) ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಡಿ. 6ರಂದು ಎಸ್.ಎನ್. ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ 22ನೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಬುಧವಾರ, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಮ್ಮ ನಿವಾಸದಲ್ಲಿ ನೋಂದಾಯಿತ 140 ವಧು-ವರರಿಗೆ ವಸ್ತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಶೀಲಾ ಸುಬ್ಬಾರೆಡ್ಡಿ, ಪ್ರಭಾಕರರೆಡ್ಡಿ, ಎ.ಶ್ರೀನಿವಾಸ್, ಪಿ.ಮಂಜುನಾಥರೆಡ್ಡಿ, ಎಸ್.ಎನ್. ಸೂರ್ಯನಾರಾಯಣರೆಡ್ಡಿ, ಎ.ವಿ. ಪೂಜಪ್ಪ, ಬಿ. ವೆಂಕಟರವಣ, ಲಕ್ಷ್ಮಿನರಸಿಂಹಪ್ಪ, ಮತ್ತು ಬಿಳ್ಳೂರು ಕೆ.ಎಂ. ನಾಗರಾಜ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಬಾಗೇಪಲ್ಲಿ: ಡಿ. 6ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.