Bagepalli : ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S N Subbareddy) ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ (KDP Meeting) ನಡೆಸಲಾಯಿತು.
ಸಭೆಯಲ್ಲಿ ಶಾಸಕರು ಹೆಚ್ಚು ಭಾರದ ಕಲ್ಲು ದಿಮ್ಮಿಗಳ ಸಾಗಾಟದಿಂದ ತೊಂದರೆ ಆಗುತ್ತಿರುವ ತೊಂದರೆ, ಅಕ್ರಮ ಮದ್ಯ ಮಾರಾಟ, ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ಮನೆಹಂಚಿಕೆ ಮಾಡದಿರುವ ಬಗ್ಗೆ, ಸಂಚಾರ ನಿಯಮ ಉಲ್ಲಂಘನೆ, ರಸ್ತೆ ಕಾಮಗಾ,ರಿ ತಾಲ್ಲೂಕಿನಲ್ಲಿ ಶಿಥಿಲ ಶಾಲೆಗಳ ಬಗ್ಗೆ, ಗ್ರಾಮಗಳಲ್ಲಿ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣ, ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಐಟಿಐ, ಆದರ್ಶ ಶಾಲೆಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ, ತಾಲ್ಲೂಕು ಆಡಳಿತಾಧಿಕಾರಿ ಅತೀಕ್ ಪಾಷ, ತಹಶೀಲ್ದಾರ್ ಮನೀಷಾ ಎನ್.ಪತ್ರಿ, ತಾಲ್ಲೂಕು ಪಂಚಾಯಿತಿ ಇಒ ಜಿ.ವಿ.ರಮೇಶ್, ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ, ರಘುನಾಥರೆಡ್ಡಿ, ರಿಜ್ವಾನ್‍ಭಾಷ, ರಾಮಕೃಷ್ಣ, ಸರಿತಾ ಮತ್ತಿತ್ತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಬಾಗೇಪಲ್ಲಿ ತ್ರೈಮಾಸಿಕ ಕೆಡಿಪಿ ಸಭೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.