
Bagepalli : ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಬಳಿ ಇರುವ ಚಿತ್ರಾವತಿ ಜಲಾಶಯ (Chitravati Reservoir) ತುಂಬಿ ಹರಿದ ಹಿನ್ನಲೆಯಲ್ಲಿ, ಶುಕ್ರವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S N Subba Reddy), ತಹಶೀಲ್ದಾರ್ ಮನೀಷಾ ಎನ್. ಪತ್ರಿ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್ ಬಾಗಿನ (Bagina) ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ “ಚಿಕ್ಕಬಳ್ಳಾಪುರ, ಗುಡಿಬಂಡೆ ತಾಲ್ಲೂಕುಗಳಲ್ಲಿ ಬಿದ್ದ ಮಳೆಯಿಂದ ಕೆರೆ, ಕುಂಟೆ, ಕಾಲುವೆಗಳು ತುಂಬಿ ಹರಿದು, ಚಿತ್ರಾವತಿ ಜಲಾಶಯಕ್ಕೆ ನೀರು ನುಗ್ಗಿದೆ. ಜಲಾಶಯ ಕೋಡಿ ಹರಿದಿದೆ. ಮಳೆ ಇಲ್ಲದೇ ಬರಗಾಲ ಹಾಗೂ ಅನಾವೃಷ್ಟಿಯಿಂದ ಸಂಕಷ್ಟ ಎದುರಾಗಿತ್ತು. ಆದರೆ, ಒಂದು ವಾರದಿಂದ ವರುಣ ಕೃಪೆ ತೋರುತ್ತಿದ್ದಾನೆ. ಇದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ” ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷೆ ಸುಜಾತಾನಾಯ್ಡು, ಪರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಮಣಿ, ಅಧ್ಯಕ್ಷೆ ನಾಗಮಣಿ ಸದಾಶಿವ ರೆಡ್ಡಿ, ಉಫಾಧ್ಯಕ್ಷೆ ಅರುಣಾ, ಮುಖಂಡರಾದ ಲಕ್ಷ್ಮೀನರಸಿಂಹಪ್ಪ, ಪಿ.ಮಂಜುನಾಥ ರೆಡ್ಡಿ, ಎಚ್.ವಿ. ನಾಗರಾಜ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಚಿತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಶಾಸಕರು appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.







