
Bagepalli : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ (Pahalgam terror attack) ಮೃತಪಟ್ಟ ಅಮಾಯಕ ಪ್ರವಾಸಿಗರಿಗೆ ಬಾಗೇಪಲ್ಲಿ ಪಟ್ಟಣದ 22ನೇ ವಾರ್ಡ್‌ನ ಖಮರ್ ಮಸೀದಿಯ ಮುಂಭಾಗ ಧರ್ಮಗುರುಗಳು, ಸಮುದಾಯದ ಮುಖಂಡರು ಮತ್ತು ಮಹಿಳೆಯರು ಶ್ರದ್ಧಾಂಜಲಿ (Tribute) ಸಲ್ಲಿಸಿದರು.
ಖಮರ್ ಮಸೀದಿಯ ಧರ್ಮಗುರು ರಿಜ್ವಾನ್ ಅಹಮದ್ ಮಾತನಾಡಿ, “ಇಸ್ಲಾಂ ಧರ್ಮ ಪ್ರಕಾರ ಒಂದು ಜೀವವನ್ನು ಕೊಲ್ಲುವುದು ಇಡೀ ಮಾನವಕುಲವನ್ನು ಕೊಂದಂತೆ. ಗುಂಡಿನ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಸಾಂತ್ವನ ಹೇಳುವುದು ಕಷ್ಟ. ಶಾಂತಿ ಸೃಷ್ಟಿಯಾಗಬೇಕು ಮತ್ತು ಪರಸ್ಪರ ಬಾಂಧವ್ಯ ಬೆಳೆಬೇಕು” ಎಂದು ಹೇಳಿದರು.
ಈ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಸೀದಿಯ ಕಾರ್ಯದರ್ಶಿ ಅದಿಲ್‍ಖಾನ್, ಸುಭಾನ್‍ಸಾಬ್, ಮೌಲಾ ಆಲಿ, ಮೌಝಿನ್ ಇಮ್ತಿಯಾಜ್ ಸಾಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.