
Bagepalli : ಬಾಗೇಪಲ್ಲಿ ಲಂಬಾಣಿ ಅಭಿವೃದ್ಧಿ ಸಂಘದ ವತಿಯಿಂದ ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಸೋಮವಾರ ಸೇವಾಲಾಲ್ ಮಹಾರಾಜರ 286ನೇ ಜಯಂತಿ (Sevalal Jayanthi) ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ “ಈಗಿನ ತಾಂಡಾಗಳಲ್ಲಿ ಅಕ್ಷರತೆ, ಉದ್ಯೋಗಾವಕಾಶ ಲಭಿಸಿದೆ. ಯಾವುದೇ ಕಾರಣಕ್ಕೂ ಕುಡಿತದ ಚಟಕ್ಕೆ ಒಳಗಾಗದೆ, ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಬಾಲ್ಯವಿವಾಹ ಮಾಡಿದರೆ ಜೈಲು ಹಾಗೂ ದಂಡ ವಿಧಿಸುವ ಕಾನೂನು ಇದೆ. ಬಾಲ್ಯದ ಜೀವನದಲ್ಲಿ ಹೆಣ್ಣುಮಕ್ಕಳಿಗೆ ವಿವಾಹ ಮಾಡಿದರೆ, ಹುಟ್ಟಿದ ಮಗುವಿನ ಆರೋಗ್ಯಕ್ಕೆ ತೊಂದರೆ ಆಗಲಿದೆ. ತಾಂಡಾ ಮುಖಂಡರು, ಅಕ್ಷರಸ್ಥರು ಜಾಗೃತಿ ಮೂಡಿಸಬೇಕಾಗಿದೆ” ಎಂದು ತಿಳಿಸಿದರು.
ಚಿಕ್ಕಬಳ್ಳಾಫುರ ಲಂಬಾಣಿ ಗೋರ್ ಬಂಜಾರ್ ಅಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟರಮಣಪ್ಪ, ಸಮುದಾಯದವರಾದ ಗೋಪಿನಾಯ್ಕ, ಶ್ರೀನಿವಾಸನಾಯ್ಕ, ಶ್ರೀರಾಮನಾಯ್ಕ, ಸದ್ದಪಲ್ಲಿ ಶಂಕರನಾಯ್ಕ, ಸೀತಾರಾಮನಾಯ್ಕ, ಗೊರ್ತಪಲ್ಲಿ ಶ್ರೀನಿವಾಸನಾಯ್ಕ, ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸನಾಯ್ಕ, ಕಾರ್ಯದರ್ಶಿ ನಾಗಭೂಷಣ, ಕೃಷ್ಣಾನಾಯ್ಕ, ವೆಂಕಟರಮಣನಾಯ್ಕ, ಬಾಲಾಜಿನಾಯ್ಕ, ನಾರಾಯಣನಾಯ್ಕ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಸದಸ್ಯ ಎ.ನಂಜುಂಡಪ್ಪ, ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ, ಸಾಗುವಳಿ ಅಕ್ರಮ-ಸಕ್ರಮ ಸಮಿತಿ ಸದಸ್ಯ ಲಕ್ಷ್ಮೀನರಸಿಂಹಪ್ಪ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಸೇವಾಲಾಲ್ ಮಹಾರಾಜರ 286ನೇ ಜಯಂತಿ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.