Hassan : ಬಾಗೂರು ಗ್ರಾಮಪಂಚಾಯಿತಿ ಅಧ್ಯಕ್ಷ (Grama Panchayat President) ಸ್ಥಾನಕ್ಕೆ ರೂಪಾ ರಘು ರಾಜೀನಾಮೆ (Resignation) ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಚೌಡೇನಹಳ್ಳಿ ಗ್ರಾಮದ ಸುಮಿತ್ರಾ ಮಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿರೋಧ (Unanimous) ಆಯ್ಕೆಯನ್ನು ಚುನಾವಣಾ ಅಧಿಕಾರಿ ಡಿ.ಬಿ ಸುನೀಲ್ ಕುಮಾರ್ ಘೋಷಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸ್ವಚ್ಛತೆಗೆ ಹೆಚ್ಚು ಆಧ್ಯತ್ತೆ ನೀಡುವುದಾಗಿ ನೂತನ ಅಧ್ಯಕ್ಷೆ ಸುಮಿತ್ರಾ ಮಂಜೇಗೌಡ ತಿಳಿಸಿದರು.
ಗ್ರಾಮಪಂಚಾಯಿತಿ ಉಪಾಧ್ಯಕ್ಷ ಬಿ.ಪಿ ಲಕ್ಷ್ಮಣ್, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಶಿವಣ್ಣ, ಪಿಡಿಒ ನಾಗೇಶ್, ಮುಖಂಡರಾದ ಓಬಳಾಪುರ ಬಸವರಾಜು, ಚಂದ್ರೇಗೌಡ, ರಘು, ದಿಲೀಪ್, ಸಚಿನ್, ಗ್ರಾಮಪಂಚಾಯಿತಿ ಸದಸ್ಯರಾದ ರಂಗಸ್ವಾಮಿ ಬಿ.ಟಿ, ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.