Bengaluru: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ತಂಬಾಕು, ಸಿಗರೇಟು ಮತ್ತು ಮದ್ಯ ಉತ್ಪನ್ನಗಳ (Ban on tobacco, liquor) ಜಾಹೀರಾತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ.
ಸಿಎಂ ಕಚೇರಿಯ ಪ್ರಕಟಣೆಯ ಪ್ರಕಾರ, ಈ ಜಾಹೀರಾತುಗಳನ್ನು ನೀಡಿದವರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಬಸ್‌ಗಳಲ್ಲಿ ಅಳವಡಿಸಿದ ಜಾಹೀರಾತುಗಳನ್ನು ತೆಗೆದುಹಾಕುವ ಕ್ರಮ ಕೂಡ ಕೈಗೊಳ್ಳಲಾಗಿದೆ.
ಒಬ್ಬ ನಾಗರಿಕರು ‘ಎಕ್ಸ್’ (ಹಳೆಯ ಟ್ವಿಟ್ಟರ್) ಮೂಲಕ ಬಸ್‌ಗಳಲ್ಲಿ ಇಂತಹ ಜಾಹೀರಾತುಗಳನ್ನು ನಿಷೇಧಿಸುವಂತೆ ಮನವಿ ಮಾಡಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ ಕೂಡಲೇ ತಂಬಾಕು, ಸಿಗರೇಟು ಮತ್ತು ಮದ್ಯದ ಜಾಹೀರಾತುಗಳನ್ನು ತೆಗೆದುಹಾಕಲು ಸಂಬಂಧಪಟ್ಟ ಪರವಾನಗಿದಾರರಿಗೆ ನೋಟಿಸ್ ನೀಡಲಾಗಿದೆ. ಬಸ್‌ಗಳಲ್ಲಿ ಇದ್ದ ‘ಕೂಲ್ ಲಿಪ್’ ಜಾಹೀರಾತುಗಳು ಈಗಾಗಲೇ ತೆಗೆದುಹಾಕಲಾಗಿದೆ.
ಇಂತಹ ಜಾಹೀರಾತುಗಳನ್ನು ಮತ್ತೆ ಪ್ರದರ್ಶನ ಮಾಡದಂತೆ ರಾಜ್ಯ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನೂ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು.
ಕೂಡ್ಲು-ಹರಳೂರು ರಸ್ತೆಗೆ ಡಾಂಬರೀಕರಣ – ಸಾರ್ವಜನಿಕ ಮನವಿಗೆ ಸರ್ಕಾರದ ಸ್ಪಂದನೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಕೂಡ್ಲು-ಹರಳೂರು ರಸ್ತೆಯ ದುರಸ್ತಿ ಬಗ್ಗೆ ಟ್ವೀಟ್ ಮಾಡಿದ್ದರು. ಈ ಕುರಿತಂತೆ ಸರ್ಕಾರ ಕೂಡ ಸ್ಪಂದಿಸಿದ್ದು, ರಸ್ತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲು BWSSB ವತಿಯಿಂದ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದೆ.
ಬಿಎಂಪಿ (BBMP) ಈಗಾಗಲೇ ರಸ್ತೆಯ ಡಾಂಬರೀಕರಣಕ್ಕಾಗಿ ಗುತ್ತಿಗೆದಾರರಿಗೆ ಆದೇಶ ನೀಡಿದ್ದು, BWSSB ಕೆಲಸ ಪೂರ್ಣವಾದ ನಂತರ ರಸ್ತೆ ಸರಿಪಡಿಸಲಾಗುವುದು ಎಂದು ತಿಳಿಸಲಾಗಿದೆ.