Home Karnataka Bandipur ಅರಣ್ಯ ಸಿಬ್ಬಂದಿಯಿಂದ ಎಡವಟ್ಟು: ನಿರ್ಬಂಧಿತ ಸ್ಥಳಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ವಿವಾದ

Bandipur ಅರಣ್ಯ ಸಿಬ್ಬಂದಿಯಿಂದ ಎಡವಟ್ಟು: ನಿರ್ಬಂಧಿತ ಸ್ಥಳಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ವಿವಾದ

136
Bandipur forest staff stumbles: Controversy over taking tourists to restricted area

ಬಂಡೀಪುರ (Bandipur) ಟೈಗರ್ ರಿಸರ್ವ್ ದೇಶದ ಪ್ರಸಿದ್ಧ ಅರಣ್ಯ ಪ್ರದೇಶಗಳಲ್ಲಿ ಒಂದು. ಇಲ್ಲಿ ನೈಸರ್ಗಿಕ ಸೌಂದರ್ಯವನ್ನು ನೋಡಲು ಸಾವಿರಾರು ಮಂದಿ ಬರುತ್ತಾರೆ. ಆದರೆ ಇತ್ತೀಚೆಗೆ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಹೊರಡಿದೆ.

ಅರಣ್ಯ ರಕ್ಷಣೆಗಾಗಿ ಸ್ಥಾಪಿಸಲಾಗಿರುವ  ಆಂಟಿ ಪೋಚಿಂಗ್ ಕ್ಯಾಂಪ್ ‌ಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗಿದ್ದು, ಇದರಿಂದ ಪರಿಸರವಾದಿಗಳು ಕೋಪಗೊಂಡಿದ್ದಾರೆ. ಈ ಶಿಬಿರಗಳು ಹುಲಿ ಮತ್ತು ಇತರೆ ಕಾಡು ಪ್ರಾಣಿಗಳನ್ನು ಕಳ್ಳಬೇಟೆಯಿಂದ ರಕ್ಷಿಸಲು ಬಳಸಲಾಗುತ್ತವೆ. ಇವು ದಟ್ಟ ಅರಣ್ಯದಲ್ಲಿ ಸ್ಥಿತವಾಗಿರುತ್ತವೆ ಮತ್ತು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿತ ಸ್ಥಳಗಳು.

ಆದರೆ ‘ಫ್ರೆಂಡ್ಸ್ ಆಫ್ ಬಂಡೀಪುರ’ ಕಾರ್ಯಕ್ರಮದ ಹೆಸರಿನಲ್ಲಿ ಈ ಶಿಬಿರಗಳಿಗೆ ಕೆಲವರು ಪ್ರವಾಸಿಗರನ್ನು ಕರೆದುಕೊಂಡು ಹೋಗಿ, ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದಾರೆ. ಇದು ಎನ್.ಟಿ.ಸಿ (NTC) ಕಾಯ್ದೆಯ ಉಲ್ಲಂಘನೆ ಆಗಿದ್ದು, ಕಾಡು ಪ್ರಾಣಿಗಳಿಗೆ ಅಪಾಯ ಉಂಟುಮಾಡಬಹುದು ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ.

ಪರಿಸರವಾದಿ ಡಿಸೆಲ್ವಾ ಅವರ ಪ್ರಕಾರ, ಈ ಸ್ಥಳಗಳನ್ನು ಬಹಿರಂಗಗೊಳಿಸುವುದರಿಂದ ಕಳ್ಳಬೇಟೆದಾರರು ಈ ಪ್ರದೇಶದ ಬಗ್ಗೆ ಮಾಹಿತಿ ಪಡೆದಿರಬಹುದು. ಅದು ಹುಲಿ, ಜಿಂಕೆ ಅಥವಾ ಆನೆಗಳ ಜೀವಕ್ಕೆ ಹಾನಿಯಂತೆಯೇ.

ಇದು ಮೊದಲ ತಪ್ಪಲ್ಲ. ಕಳೆದ ತಿಂಗಳು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಚಿತ್ರಶೂಟಿಂಗ್‌ಗೆ ಅನುಮತಿ ನೀಡಿದ ಪ್ರಕರಣ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಇಡೀ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಎಡವಟ್ಟು ನಡೆದಿದೆ.

ಅರಣ್ಯವನ್ನು ರಕ್ಷಿಸಬೇಕಾದ ಸಿಬ್ಬಂದಿಯೇ ಕಾನೂನು ಉಲ್ಲಂಘಿಸಿರುವುದು ಖಂಡನಾರ್ಹ. ಪರಿಸರ ಸಂರಕ್ಷಣೆಗೆ ಹೆಚ್ಚು ಜವಾಬ್ದಾರಿ ಹೊತ್ತವರಿಂದ ಇಂತಹ ನಿರ್ಲಕ್ಷ್ಯ ತೀವ್ರ ಚಿಂತೆಯ ವಿಷಯವಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page