Bengaluru (Bangalore) : ಬೆಂಗಳೂರಿನ ಮಾರುತಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಎಸ್.ಎಂ. ಜಯಕರ್ (Dr. Jayakara S M) ರವರು ಬೆಂಗಳೂರು ವಿಶ್ವವಿದ್ಯಾಲಯದ (Bangalore University) ನೂತನ ಉಪ ಕುಲಪತಿಯಾಗಿ (Vice-Chancellor) ಪ್ರಭಾರ ಕುಲಪತಿಯಾಗಿದ್ದ ಪ್ರೊ. ಸಿಂಥಿಯಾ ಮೆನೇಜಸ್ ಅವರಿಂದ ಸೋಮವಾರ ಅಧಿಕಾರ ಸ್ವೀಕರಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಜಯಕರ್ ಅವರ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಡಿಸಿದ್ದು ಅಧಿಕಾರ ವಹಿಸಿಕೊಂಡ ದಿನದಿಂದ ನಾಲ್ಕು ವರ್ಷಗಳ ಅವಧಿ ಯವರೆಗೆ ಅಥವಾ 67 ವರ್ಷಗಳಾಗುವವರೆಗೆ ಅವರು ಕುಲಪತಿ ಹುದ್ದೆಯಲ್ಲಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆ (Sri Jayadeva Institute of Cardiovascular Sciences and Research) ಮಾಜಿ ನಿರ್ದೇಶಕರಾಗಿದ್ದ ಡಾ. ಎನ್. ಪ್ರಭುದೇವ್ ರವರ ನಂತರ ವೈದ್ಯಕೀಯ ವಲಯದಿಂದ ಕುಲಪತಿಯಾಗಿ ಡಾ. ಎಸ್.ಎಂ. ಜಯಕರ್ ರವರು ನೇಮಕಗೊಂಡಿದ್ದಾರೆ.