Bangarapet (Bangarpet), Kolar : ಬಂಗಾರಪೇಟೆ ಪಟ್ಟಣದ Congress ಭವನದ ಸಮೀಪ ಸಂಗೊಳ್ಳಿ ರಾಯಣ್ಣ (Sangolli Rayanna) ಪ್ರತಿಮೆ ಅನಾವರಣ ಜತೆಗೆ ಕನಕದಾಸರ ಪ್ರತಿಮೆ ಸ್ಥಾಪಿಸಿ, ಉದ್ಯಾನದ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರು ಇಡಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ (MLA S. N. Narayanaswamy) ಭರವಸೆ ನೀಡಿದರು.
ಬಂಗಾರಪೇಟೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು “ಪುರಸಭೆ ನಿಯಮಾವಳಿಯಂತೆ ಪಟ್ಟಣದ ಕಾಂಗ್ರೆಸ್ ಭವನದ ಸಮೀಪ ಸಂಗೊಳ್ಳಿರಾಯಣ್ಣ ಪ್ರತಿಮೆ ಅನಾವರಣ ಮಾಡುವುದರ ಜತೆಗೆ ಕನಕದಾಸರ ಪ್ರತಿಮೆ ಸ್ಥಾಪಿಸಿ, ಉದ್ಯಾನದ ವೃತ್ತಕ್ಕೆ ಸಂಗೊಳ್ಳಿರಾಯಣ್ಣನ ಹೆಸರು ಇಡಲಾಗುವುದು.ಕುರುಬ ಸಮಾಜದ ಮುಖಂಡರ ಮನವಿಯಂತೆ ಕಾಂಗ್ರೆಸ್ ಅವಧಿಯಲ್ಲಿಯೇ ಕನಕ ಭವನಕ್ಕೆ ಸ್ಥಳ ಒದಗಿಸಲಾಗಿತ್ತು ” ಎಂದು ತಿಳಿಸಿದರು.
ಕುರುಬರ ಸಮುದಾಯದ ಮುಖಂಡರಾದ ಅಪ್ಪಯ್ಯಗೌಡ, ಎಲ್.ರಾಮಕೃಷ್ಣಪ್ಪ, ಕೆ.ವಿ.ನಾಗರಾಜ್, ಮಂಜುನಾಥ್ ,ಜಯಣ್ಣ, ಚಲಪತಿ, ಅಮರೇಶ್, ಭಾಗ್ಯಮ್ಮ, ನಾರಾಯಣಸ್ವಾಮಿ, ವೆಂಕಟೇಶ್, ವೆಂಕಟಸ್ವಾಮಿ ಮುನಿವೆಂಕಟಪ್ಪ ಉಪಸ್ಥಿತರಿದ್ದರು.