
Bangarapet (Bangarapete), Kolar : ಬಂಗಾರಪೇಟೆ ತಾಲ್ಲೂಕಿನ ನೇರಳೆಕೆರೆ ಗ್ರಾಮದ ಬಳಿಯ ಕೆರೆಯಲ್ಲಿ ಬುಧವಾರ ತೆಪ್ಪ ಬುಡಮೇಲಾಗಿ ಎಸ್.ಜಿ.ಕೋಟೆ (S G Kote) ನವೀನ್ ಕುಮಾರ್(35), ಕೆರೆಕೋಡಿ ಮೋಹನ್(25), ಚಿಕ್ಕವಲಗಮಾದಿ ರಾಜೇಂದ್ರ ಕುಮಾರ್ (36) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ (Death by Drowning).
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈ ಮೂರು ಜನ ಕೆಲಸಕ್ಕಾಗಿ ಪ್ರತಿನಿತ್ಯ ಬಂಗಾರಪೇಟೆಯಿಂದ ಬೆಂಗಳೂರಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದರು. ಬುಧವಾರ ರೈಲ್ವೆ ಲೈನ್ ತಾಂತ್ರಿಕ ದೋಷದಿಂದಾಗಿ ಬೆಂಗಳೂರಿಗೆ ತೆರಳಬೇಕಿದ್ದ ರೈಲುಗಳು ಸುಮಾರು 2 ರಿಂದ 3 ತಾಸು ವಿಳಂಬವಾದ ಕಾರಣ ಬೆಂಗಳೂರಿಗೆ ತೆರಳಿರಲಿಲ್ಲ. ಹಾಗಾಗಿ ಕೆರೆಯಲ್ಲಿ ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ್ದ ಸ್ನೇಹಿತರು ಕೆರೆ ಮಧ್ಯೆ ತೆಪ್ಪ ಸಮತೋಲನ ತಪ್ಪಿದ್ದರಿಂದ ಕೆರೆಯಲ್ಲಿ ಮುಳುಗಿ ಹೊರಬರಲಾಗದೆ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮೂವರ ಶವಗಳನ್ನು ಹೊರತೆಗೆದಿದ್ದಾರೆ.