back to top
23.3 C
Bengaluru
Tuesday, September 16, 2025
HomeWorldUSABangla ದಲ್ಲಿ ಅಲ್ಪಸಂಖ್ಯಾತರ ರಕ್ಷಣೆ: Trump ಗೆ ಒತ್ತಾಯ

Bangla ದಲ್ಲಿ ಅಲ್ಪಸಂಖ್ಯಾತರ ರಕ್ಷಣೆ: Trump ಗೆ ಒತ್ತಾಯ

- Advertisement -
- Advertisement -

Washington: ಬಾಂಗ್ಲಾದೇಶದಲ್ಲಿ (Bangladesh) ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಮತ್ತು ಅವರನ್ನು ರಕ್ಷಿಸಲು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ (President Donald Trump) ಅವರನ್ನು ಬಾಂಗ್ಲಾದೇಶಿ ಅಮೆರಿಕನ್ ಹಿಂದೂ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಒತ್ತಾಯಿಸಿವೆ.

ಇಸ್ಲಾಮಿಸ್ಟ್ ದುಷ್ಟಶಕ್ತಿಗಳಿಂದ ಈ ದೌರ್ಜನ್ಯ ನಡೆಯುತ್ತಿದ್ದು, ಅನೇಕರು ದೇಶದ್ರೋಹದ ಆರೋಪದ ಮೇಲೆ ತಪ್ಪಾಗಿ ಬಂಧಿತರಾಗಿದ್ದಾರೆ. ಚಿನೊಯ್ ಕೃಷ್ಣ ದಾಸ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಟ್ರಂಪ್‌ಗೆ ಒತ್ತಾಯಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಆಳುತ್ತಿರುವ ದ್ವೇಷ ಗುಂಪುಗಳು ದೇಶವನ್ನು ಮೂಲಭೂತೀಕರಣದ ದಾರಿ ತೋರಿಸುತ್ತಿದ್ದು, ಇದು ದಕ್ಷಿಣ ಏಷ್ಯಾ ಮತ್ತು ಪ್ರಪಂಚದ ಉಳಿದ ಭಾಗಗಳಿಗೆ ಹಾನಿಕಾರಕ ಎಂದು ಎಚ್ಚರಿಸಲಾಗಿದೆ.

ಅಲ್ಪಸಂಖ್ಯಾತರ ರಕ್ಷಣೆಗೆ ಈ ಕೆಳಗಿನ ಶಿಫಾರಸುಗಳನ್ನು ಮಾಡಲಾಗಿದೆ:

  • ಸಮಗ್ರ ಅಲ್ಪಸಂಖ್ಯಾತರ ಸಂರಕ್ಷಣಾ ಕಾಯ್ದೆ.
  • ಸುರಕ್ಷಿತ ಪ್ರದೇಶಗಳ ಸ್ಥಾಪನೆ.
  • ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತದಾನದ ಹಕ್ಕು.
  • ದ್ವೇಷಪೂರಿತ ಅಪರಾಧಗಳು ಮತ್ತು ಭಾಷಣಗಳ ವಿರುದ್ಧ ಕಠಿಣ ಕಾನೂನು.

ಇಸ್ಕಾನ್‌ನ ಮಾಜಿ ನಾಯಕ ದಾಸ್ ಅವರನ್ನು ನವೆಂಬರ್ 25 ರಂದು ಢಾಕಾದ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ದೇಶದ್ರೋಹದ ಆರೋಪದಲ್ಲಿ ನ್ಯಾಯಾಲಯ ಜಾಮೀನು ತಿರಸ್ಕರಿಸಿದ್ದು, ಪ್ರಕರಣದ ವಿಚಾರಣೆ ಜನವರಿ 2ರಂದು ನಡೆಯಲಿದೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಲು, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳನ್ನು ಕಳುಹಿಸಬೇಕು ಎಂದು ಟ್ರಂಪ್‌ಗೆ ಜ್ಞಾಪಕ ಪತ್ರದಲ್ಲಿ ಸಲಹೆ ನೀಡಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page