Search
WhatsApp alerts

Home › Business

BBMP ಹೊಸ ಖಾತಾ ಅಭಿಯಾನ– ಆಸ್ತಿ ಮಾಲೀಕರಿಗೆ ಶಾಕ್!

administrator · Published

BBMP

ಬೆಂಗಳೂರು: ಬೆಂಗಳೂರಿನ ಎಲ್ಲಾ ಆಸ್ತಿ ಮಾಲೀಕರು ಇ-ಖಾತಾ (e-khata) ಮಾಡಿಸುವುದು ಕಡ್ಡಾಯ ಎಂಬ ಸರ್ಕಾರದ ಆದೇಶದ ಅನಂತರ, ಬಿಬಿಎಂಪಿ ಅದರ ಅನುಷ್ಠಾನಕ್ಕೆ ತೀವ್ರ ಗಂಭೀರತೆ ನೀಡುತ್ತಿದೆ. BBMP ಕಚೇರಿಗಳು ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇದನ್ನು ಮಾಡಿಸಲು ಅವಕಾಶ ನೀಡಲಾಗಿತ್ತು. ಆದರೆ, ಇದುವರೆಗೆ ಇ-ಖಾತಾ ಮಾಡಿಸದವರಿಗೆ ಬಿಬಿಎಂಪಿ ಹೊಸ ಪ್ಲಾನ್ ರೂಪಿಸಿದ್ದು, 45 ದಿನಗಳ ವಿಶೇಷ ಅಭಿಯಾನ ನಡೆಸಲು ಸಜ್ಜಾಗಿದೆ.

ಬಿಬಿಎಂಪಿ ಎಂಟು ವಲಯಗಳಲ್ಲಿ ಈ ಅಭಿಯಾನವನ್ನು ಕೈಗೆತ್ತಿಕೊಂಡಿದ್ದು, 1 ಲಕ್ಷ ಖಾತಾ ಮಾಡಿಸುವ ಗುರಿ ಹೊಂದಿದೆ. ಈ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಬಿಬಿಎಂಪಿ ಹೊಸ ಯೋಜನೆ ರೂಪಿಸಿದೆ.

ಖಾತಾ ಮಾಡಿದ ಬಳಿಕ ಮಾತ್ರ ತೆರಿಗೆ ಪಾವತಿ – ಹೊಸ ನಿಯಮ

  • ಖಾತಾ ಮಾಡಿದ ನಂತರ ಆಸ್ತಿ ತೆರಿಗೆ ಪಾವತಿ ಕಡ್ಡಾಯ
  • ತೆರಿಗೆ ಪಾವತಿಸಿದರಷ್ಟೇ ಖಾತಾ ಡೌನ್‌ಲೋಡ್ ಮಾಡುವ ಅವಕಾಶ
  • ಈ ಯೋಜನೆಯಿಂದ 100 ಕೋಟಿ ರೂ. ಆದಾಯ ಲಭಿಸಬಹುದು ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಈ ಯೋಜನೆಯಿಂದ ಇ-ಖಾತಾ ಗೊಂದಲದಿಂದ ಸುಸ್ತಾದ ಮಾಲೀಕರಿಗೆ ಸ್ವಲ್ಪ ಅನುಕೂಲ ಸಿಗಬಹುದು. ಆದರೆ, ತೆರಿಗೆ ಪಾವತಿ ತಪ್ಪಿಸಿದ್ದ ಮತ್ತು ಖಾತಾ ಮಾಡಿಸದೇ ಇದ್ದ ಮಾಲೀಕರಿಗೆ ಈ ಹೊಸ ಉಪಾಯ ಬಿಸಿತುಪ್ಪ ಆಗಬಹುದು.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page